

ಹಾಸನ: ಉಳುವವನಿಗೆ ಭೂಮಿಯನ್ನು ನೀಡುವ ಮೂಲಕ ಲಕ್ಷಾಂತರ ಮನೆಗಳಿಗೆ ಬೆಳಕಾಗಿ ಬಂದವರು ಡಿ.ದೇವರಾಜ ಅರಸು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಹೇಳಿದರು.
ಡಿ.ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಹಿಂದುಳಿದವರು, ದಲಿತ ವರ್ಗದವರು ಹೀಗೆ ಎಲ್ಲರನ್ನೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದವರು ಅರಸು ಅವರಾಗಿದ್ದಾರೆ. ಇಂದು ಅವರು ಹಾಕಿಕೊಟ್ಟ ದಾರಿಯೇ ನಮಗೆಲ್ಲ ಬೆಳಕಾಗಿದೆ ಎಂದರು.