

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಿಗೆ ಜು.31ರವರೆಗೆ ಚಾಲ್ತಿಯಲ್ಲಿರುವ ಒಂದು ಬಾರಿ ಪರಿಹಾರ ಯೋಜನೆಯನ್ನು (ಒಟಿಎಸ್) ಸದುಪಯೋಗಪಡಿಸಿಕೊಳ್ಳಲು ವಲಯವಾರು ಹೆಲ್ಪ್ ಡೆಸ್ಕ್ ಪ್ರಾರಂಭಿಸಲಾಗಿದೆ.
ಎಲ್ಲ ವಲಯ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿದ್ದು, ಹೆಲ್ಪ್ ಡೆಸ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳ ಮಾಹಿತಿಯನ್ನು ನೀಡಲಾಗಿದೆ. ಆಯಾ ವಲಯಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡೆಲ್ ಆಫೀಸರ್‌ಗಳನ್ನಾಗಿ ನಿಯೋಜಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಆಸ್ತಿ ಮಾಲೀಕರು ತಮ್ಮ ವಲಯ ಕಚೇರಿಗಳಿಗೆ ಭೇಟಿ ನೀಡಿ ಒಂದು ಬಾರಿ ಪರಿಹಾರ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಸೇವಾ ಶುಲ್ಕವನ್ನು ಪಾವತಿಸಬಹುದಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ವಲಯದ ಹೆಸರು ನೋಡೆಲ್ ಅಧಿಕಾರಿ ಹೆಲ್ಪ್ ಡೆಸ್ಕ್ ಅಧಿಕಾರಿ
ಬೊಮ್ಮನಹಳ್ಳಿ 9480684353 9164605512
ಪಶ್ಚಿಮ 9480685411 7829569863
ಪೂರ್ವ 9480685619 9480683534
ದಕ್ಷಿಣ 9480685362 9008002661
ದಾಸರಹಳ್ಳಿ 9480685427 9538919363
ಮಹದೇವಪುರ 9480684170 9844013851
ಆರ್‌ಆರ್ ನಗರ 9844753625 9986646186
ಯಲಹಂಕ 9480685227 8660838205