

ಮುಂಡರಗಿ: ಸತ್ಯ, ಸ್ತ್ರೀ ಸಮಾನತೆ, ಸ್ವಚ್ಛತೆ, ಅಹಿಂಸೆಯಂತಹ ವಿಚಾರಗಳನ್ನೊಳಗೊಂಡ ಗಾಂಧೀಜಿ ಅವರ ತತ್ವ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಹೇಳಿದರು.
ಪಟ್ಟಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಮಹಾತ್ಮ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆ ಗಾಂಧಿ ಭಾರತ ಅಭಿಯಾನದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಪಿಸಿಸಿ ವತಿಯಿಂದ ಎಲ್ಲೆಡೆ ಗಾಂಧಿ ಭಾರತ ಅಭಿಯಾನದಡಿ ಇಂದಿನಿಂದ ವರ್ಷಪೂರ್ತಿ ಗಾಂಧೀಜಿ ಕುರಿತು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಕೋಟೆಭಾಗದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಗಾಂಧೀಜಿ ಭಾವಚಿತ್ರದೊಂದಿಗೆ ಹೊರಟ ಗಾಂಧಿ ನಡಿಗೆಯು ಪುರಸಭೆ ಗಾಂಧಿಭವನ ತಲುಪಿತು.
ಹೇಮಂತಗೌಡ ಪಾಟೀಲ, ರಾಮಚಂದ್ರ ಕಲಾಲ, ಶೋಭಾ ಮೇಟಿ, ಪೂಜಾ ಕಮ್ಮಾರ, ಭುವನೇಶ್ವರಿ ಕಲ್ಲಕುಟಗರ, ನಾಗರಾಜ ಹೊಂಬಳಗಟ್ಟಿ, ಅಶೋಕ ಹುಬ್ಬಳ್ಳಿ, ಸುರೇಶ ಮಾಗಡಿ, ಸೀತಾ ಬಸಾಪೂರ, ಪ್ರತಿಭಾ ಹೊಸಮನಿ, ಜ್ಯೋತಿ ಕುರಿಯವರ, ದಾನೇಶ್ವರಿ ಭಜಂತ್ರಿ, ರೈಮಾನಸಾಬ ಮಲ್ಲನಕೇರಿ, ರಾಜಾಭಕ್ಷೀ ಬೆಟಗೇರಿ, ಅಂದಪ್ಪ ಬಳ್ಳಾರಿ, ಡಿ.ಎಂ. ಕಾತರಕಿ, ವಿ.ಎಂ. ಪಾಟೀಲ, ಉಮೇಶ ಕಲಾಲ, ರಾಘವೇಂದ್ರ ನರೇಗಲ್ಲ ಇತರರು ಇದ್ದರು.