

ಬೆಂಗಳೂರು: ಬಿಬಿಎಂಪಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಗರದಲ್ಲಿ ಭಾನುವಾರ ಫೀವರ್ ಕ್ಲಿನಿಕ್ (ಜ್ವರ ತಪಾಸಣೆ ಕೇಂದ್ರ) ಆರಂಭಿಸಲಾಗಿದ್ದು, ಮೊದಲ ದಿನ 82 ಜನರು ತಪಾಸಣೆಗೆ ಒಳಗಾದರು.
31 ಕಡೆಗಳಲ್ಲಿ ಕ್ಲಿನಿಕ್ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯ ನಿರ್ವಹಿಸುತ್ತಿವೆ. ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕ್ಲಿನಿಕ್ನಲ್ಲೂ ವೈದ್ಯಾಧಿಕಾರಿ, ಶುಶ್ರೂಷಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ನಿಯೋಜಿಸಲಾಗಿದೆ. ಆದರೆ, ಮಾಹಿತಿ ಕೊರತೆಯಿಂದಾಗಿ ಜನರ ಸಂಖ್ಯೆ ವಿರಳವಾಗಿತ್ತು.
ಸಣ್ಣ ಕಾಯಿಲೆಗೊ ಪರೀಕ್ಷೆ: ಫೀವರ್ ಕ್ಲಿನಿಕ್ಗಳಲ್ಲಿ ನೇರವಾಗಿ ರೋಗಿಗಳ ಪರೀಕ್ಷೆ ಮಾಡುವವರಿಗೆ ಪಿಪಿಇ ಕಿಟ್ ನೀಡಲಾಗಿದೆ. ತಲೆಯಿಂದ ಕಾಲಿನವರೆಗೆ ಮುಚ್ಚುವ ರಕ್ಷಾ ಕವಚ ಧರಿಸಿ ಸಾರ್ವಜನಿಕರ ತಪಾಸಣೆ ಮಾಡಲಾಗುತ್ತಿದೆ. ಕರೊನಾ ಅಲ್ಲದೆ ಬೇರೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಜನ ಭೇಟಿ ನೀಡಬಹುದಾಗಿದೆ.
ಸ್ಯಾನಿಟೈಸರ್ ಬಳಕೆ: ಪ್ರತಿ ಕ್ಲಿನಿಕ್ನಲ್ಲಿ ತಪಾಸಣೆಗೆ ಬರುವವರಿಗೆ ಅಂತರ ಕಾಯ್ದುಕೊಳ್ಳಲು ಸ್ಥಳ ಗುರುತು ಮಾಡಲಾಗಿದೆ. ನೈರ್ಮಲ್ಯಕ ಬಳಕೆ ಮಾಡಲಾಗುತ್ತಿದೆ. ಸಾಮಾನ್ಯ ಜ್ವರ ಇದ್ದವರಿಗೆ ಮಾತ್ರೆ, ಸುಸ್ತಿಗೆ ಒಆರ್ಎಸ್ ಮತ್ತು ನೆಗಡಿ ಇದ್ದವರಿಗೆ ಔಷಧ ವಿತರಿಸಲಾಗುತ್ತಿದೆ ಎಂದು ಪಾಲಿಕೆ ಅರೋಗ್ಯ ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿ ನಡೆಯುತ್ತೆ ಜ್ವರ ತಪಾಸಣೆ
ಬನಶಂಕರಿ ರೆಫರಲ್ ಆಸ್ಪತ್ರೆ, 27ನೇ ಕ್ರಾಸ್, 17ನೇ ಮುಖ್ಯರಸ್ತೆ, ಬಿಎನ್ಎಂ ಕಾಲೇಜು ಹತ್ತಿರ, ಬನಶಂಕರಿ 2ನೇ ಹಂತ, ಮೊ- 94806 84154
ಎಎಂಸಿ ರಸ್ತೆ, ಕೆ.ಜಿ. ಹಳ್ಳಿ, ಮೊ-97410 10458
ಗಣೇಶ ದೇವಸ್ಥಾನ ರಸ್ತೆ, ಎಂ.ಆರ್. ಪಾಳ್ಯ, ಜೆ.ಸಿ. ರಸ್ತೆ, ಮೊ- 94806 83577
ಪುಷ್ಪಾಂಜಲಿ ಸಿನಿಮಾ ಮಂದಿರ ಹತ್ತಿರ, ಆರ್.ಟಿ. ನಗರ, ಮೊ-94806 84144
ಕೇಂಬ್ರಿಜ್ ರಸ್ತೆ, ಹಲಸೂರು ಪೊಲೀಸ್ ಠಾಣೆ ಹತ್ತಿರ, ಮೊ-99015 07325
ಯಶವಂತಪುರ ಟ್ರಾನ್ಸಿಟ್ ಕ್ಲಿನಿಕ್, ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣ, ಮೊ- 81232 89656
ಮೆಜೆಸ್ಟಿಕ್ ಟ್ರಾನ್ಸಿಟ್ ಕ್ಲಿನಿಕ್- ಮೆಜೆಸ್ಟಿಕ್, ಬಿಎಂಟಿಸಿ ಬಸ್ ನಿಲ್ದಾಣ, ಮೊ- 96639 46534
ಟಸ್ಕರ್ ಟೌನ್- ಬ್ರಾಡ್ವೇ ಡಿಸ್ಪೆನ್ಸರಿ, ಶಿವಾಜಿನಗರ, ಮೊ- 78999 71965
1ನೇ ಕ್ರಾಸ್, ಹಳೇ ಏರ್ಪೋರ್ಟ್ ರಸ್ತೆ, ಕೋಡಿಹಳ್ಳಿ, ಮೊ- 97318 30194
ಹೇರೋಹಳ್ಳಿ ಯುಪಿಎಚ್ಸಿ, ಮೊ- 9900156336
ಲಗ್ಗೆರೆ ಯುಪಿಎಚ್ಸಿ, ಮೊ-99012 51643.
ಜಿ.ಎಚ್.ಯಲಹಂಕ, ಯುಪಿಎಚ್ಸಿ, ಮೊ- 94486 94945
ಕೊಡಿಗೇಹಳ್ಳಿ ಯುಪಿಎಚ್ಸಿ, ಮೊ- 94486 94945
ದಾಸರಹಳ್ಳಿ- ಮೈಲಸಂದ್ರ, ಯುಪಿಎಚ್ಸಿ, ಮೊ- 94495 83898
ಮಾರತ್ಹಳ್ಳಿ, ಯುಪಿಎಚ್ಸಿ, ಮೊ- 86605 69642
ಮಹದೇವಪುರ- ಜಿಎಚ್ಕೆಆರ್ ಪುರ, ಯುಪಿಎಚ್ಸಿ, ಮೊ- 94483 32195
ಬೊಮ್ಮನಹಳ್ಳಿ- ಬೇಗೂರು, ಯುಪಿಎಚ್ಸಿ
ಬೊಮ್ಮನಹಳ್ಳಿ- ಕೊಣನಕುಂಟೆ- ಪ್ರಾಥಮಿಕ ಆರೋಗ್ಯ ಕೇಂದ್ರ, ಕೋಣನಕುಂಟೆ ಠಾಣೆ ಹತ್ತಿರ, ಮೊ- 94483 43155
ಬೊಮ್ಮನಹಳ್ಳಿ- ಅನೇಕಲ್, ಯುಪಿಎಚ್ಸಿ, 96065 07262
2ನೇ ಕ್ರಾಸ್, ಸಂಗಮ್ ವೃತ್ತ, ಗೋರಿಪಾಳ್ಯ, ಮೊ-94806 83908
ಶೇಷಾದ್ರಿಪುರ, ಇಎಸ್ಐ ಆಸ್ಪತ್ರೆ ಪಕ್ಕ, ಕೋದಂಡರಾಂಪುರ, ಮೊ- 98862 10326
ಎಜಿಬಿ ಬಡಾವಣೆ, 2ನೇ ಮುಖ್ಯ ರಸ್ತೆ, ಮಹಾಲಕ್ಷಿ್ಮೕ ಬಡಾವಣೆ, ಬೆಂ.86, ಮೊ- 80295 58483
ಜಿಕೆಡಬ್ಲ್ಯು ಬಡಾವಣೆ, ಸರಸ್ವತಿನಗರ, ಮೂಡಲಪಾಳ್ಯ, ಬೆಂ. 40.
ಜಿಲ್ಲಾ ಯುಪಿಎಚ್ಸಿ, ವಾರ್ಡ್ ಸಂಖ್ಯೆ 76, 3ನೇ ಮುಖ್ಯ ರಸ್ತೆ, ಸೇವಾ ಕೇಂದ್ರ ಬಿಲ್ಡಿಂಗ್, ನಾಗಪ್ಪ ಬಡಾವಣೆ, ಬೆ.21, ಮೊ- 99807 67810
ಬಿಬಿಎಂಪಿ ಬಿಲ್ಡಿಂಗ್ ನೇತಾಜಿ ವೃತ್ತ, ಮತ್ತಿಕೆರೆ, ಬೆಂ.54, ಮೊ- 98866 20365.
ಶ್ರೀರಾಮಪುರ- ರೆಫರಲ್ ಆಸ್ಪತ್ರೆ, ಬೆಂ.21, ಮೊ- 94806 83788.
12ನೇ ಕ್ರಾಸ್, 35ನೇ ಮುಖ್ಯ ರಸ್ತೆ, ಜೆ.ಪಿ. ನಗರ, ಬೆಂ.78. ಮೊ- 90081 93333.
ಎಚ್. ಸಿದ್ದಯ್ಯರಸ್ತೆ- 2ನೇ ಕ್ರಾಸ್, ಜೆ.ಸಿ.ರಸ್ತೆ, ಬೆಂ.2, ಮೊ- 98804 35573
12ನೇ ಕ್ರಾಸ್, ಹನುಮಂತನಗರ, ಬನಶಂಕರಿ 1ನೇ ಹಂತ, ಬೆಂ.50, ಮೊ-99644 99007
9ನೇ ಕ್ರಾಸ್, 9ನೇ ಮುಖ್ಯರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮೊ- 99860 30169
ಆಡುಗೋಡಿ ಡಿಸ್ಪೆನ್ಸರಿ- ಭುವನೇಶ್ವರಿ ರಸ್ತೆ ಬಜಾರ್ ಸ್ಟ್ರೀಟ್, ಆಡುಗೋಡಿ, ಬೆ.30, ಮೊ- 99021 56278.