ಶಿರಾದಲ್ಲಿ ಕರೊನಾ ಪರೀಕ್ಷೆ ಕೇಂದ್ರ ಆರಂಭ

13- sira-01
Published on

ಶಿರಾ : ನಗರದ ಹೊರವಲಯದ ವಾಜಪೇಯಿ ವಸತಿ ಶಾಲೆಯಲ್ಲಿ ಕರೊನಾ ಸೋಂಕಿನ ಪರೀಕ್ಷೆ ಕೇಂದ್ರ ಬುಧವಾರ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ವ್ಯವಸ್ಥೆ ಪರಿಶೀಲಿಸಿದರು.

ಹೊರರಾಜ್ಯಗಳ ಅಥವಾ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಜಿಲ್ಲೆಗೆ ಬರುತ್ತಿರುವವರನ್ನು ತಾಲೂಕಿನ ಗಡಿ ಗ್ರಾಮ ಉಜ್ಜನಕುಂಟೆ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಚೆಕ್ ಪೋಸ್ಟ್ ನಿಂದ ವಾಜಪೇಯಿ ವಸತಿ ಶಾಲೆಯಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಬರುವವರ ವೈಯಕ್ತಿಕ ವಿವರ, ಪ್ರಯಾಣದ ವಿವರ ಮೊದಲಾದ ವಿವರ ಕಲೆ ಹಾಕಲಾಗುತ್ತಿದೆ. ತಪಾಸಣೆ ವೇಳೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅವರನ್ನು ಸ್ಥಳದಲ್ಲಿಯೇ ಕ್ವಾರನ್‌ಟೈನ್ ಮಾಡಲಾಗುವುದು. ಸಂಗ್ರಹಿಸಿದ ಮಾದರಿ ಲ್ಯಾಬ್‌ಗೆ ಕಳುಹಿಸಿ, ಫಲಿತಾಂಶ ಬಂದ ನಂತರ ನೆಗೆಟಿವ್ ಬಂದರಲ್ಲಿ ಅವರನ್ನು ಅವರ ಊರುಗಳಿಗೆ ಕಳುಹಿಸಲಾಗುವುದು. ಸೋಂಕು ದೃಢಪಟ್ಟಲ್ಲಿ ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುವುದು.

ಶಿಬಿರದಲ್ಲಿ ಮೂರು ವಿಭಾಗ ಮಾಡಲಾಗಿದ್ದು, ಮೊದಲನೇ ವಿಭಾಗದಲ್ಲಿ ಶಿರಾ, ಪಾವಗಡ ಮಧುಗಿರಿ ಮತ್ತು ಕೊರಟಗೆರೆ ತಾಲೂಕಿಗೆ ಬರುವ ಪ್ರಯಾಣಿಕರ ತಪಾಸಣೆ ನಡೆಸಿದರೆ, ತುಮಕೂರು, ಗುಬ್ಬಿ ಮತ್ತು ಕುಣಿಗಲ್ ತಾಲೂಕಿಗೆ ತೆರಳುವ ನಾಗರಿಕರನ್ನು ಎರಡನೇ ಕೌಂಟರ್‌ನಲ್ಲಿ ಮತ್ತು ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆಗೆ ತೆರಳುವ ಪ್ರಯಾಣಿಕರನ್ನು ಮೂರನೇ ಕೌಂಟರ್‌ನಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಾಲೂಕು ವೈದ್ಯಾಧಿಕಾರಿ ಅಫ್ಜಲ್ ಉರ್ ರೆಹಮಾನ್, ಡಿವೈಎಸ್ಪಿ ಕುಮಾರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್, ಕಸಬಾ ಕಂದಾಯ ತನಿಖಾಧಿಕಾರಿ ಮಂಜುನಾಥ್ ಇದ್ದರು.

24 ಗಂಟೆಯೂ 3 ಶ್‌ಟಿಗಳಲ್ಲಿ ಕೆಲಸ ನಿರ್ವಹಿಸುವ ಶಿಬಿರ, ಶಿರಾ ಮೂಲಕ ಜಿಲ್ಲೆ ಪ್ರವೇಶಿಸುವ ಎ್ಲರ ಮೇಲೆ ನಿಗಾ ವಹಿಸಲಿದೆ. ಪೊಲೀಸ್, ಕಂದಾಯ ಮತ್ತಿತರ ಇಲಾಖೆಗಳ ಸಿಬ್ಬಂದಿ ನೆರವಿನೊಂದಿಗೆ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಿ ಸೋಂಕು ತಡೆಗಟ್ಟುವುದು ಜಿಲ್ಲಾಡಳಿತದ ಗುರಿಯಾಗಿದೆ. ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net