ಕೂಡಲೇ ಹೆಸರು ಖರೀದಿ ಕೇಂದ್ರ ಆರಂಭಿಸಿ, ಧಾರವಾಡ ಜಿಲ್ಲಾಡಳಿತಕ್ಕೆ ಬೆಳೆಗಾರರ ಆಗ್ರಹ

IMG-20240825-WA0011.jpg
Published on

ಹುಬ್ಬಳ್ಳಿ: ಪ್ರತಿ ವರ್ಷ ರೈತರ ಕೈಗೆ ಸಲು ಬಂದಾಗ ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಾಗುವುದು ಸಾಮಾನ್ಯ ಸಂಗತಿ. ಅಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಖರೀದಿಸಬೇಕೆಂಬುದು ಬೆಳೆಗಾರರ ಒಕ್ಕೋರಲ ಒತ್ತಾಯ.

ಧಾರವಾಡ ಜಿಲ್ಲೆಯಲ್ಲಿ ಸದ್ಯ ಹೆಸರು ಬೆಳೆ ಉತ್ತಮವಾಗಿ ಬಂದಿದೆ. ಉತ್ತಮ ಮಳೆಯೂ ಆಗಿರುವುದರಿಂದ ರೈತರು ಖುಷಿಯಿಂದ ಹೆಸರುಕಾಳನ್ನು ಒಕ್ಕಲು ಮಾಡಿ ಮಾರುಕಟ್ಟೆಗೆ ತಂದರೆ ವರ್ತಕರು ಬಾಯಿಗೆ ಬಂದ ದರಕ್ಕೆ ಟೆಂಡರ್ ಕೂಗುತ್ತಿದ್ದು, ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ.

ಕಳೆದ 15 ದಿನಗಳಿಂದ ಹೆಸರು ಬೆಳೆಗಾರರು ಸರ್ಕಾರ ಖರೀದಿ ಕೇಂದ್ರ ಆರಂಭಿಸಬೇಕೆಂದು ಕೇಳುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೂ ಬೇಡಿಕೆ ಈಡೇರದೇ ಇರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು. ಖರೀದಿ ಕೇಂದ್ರಗಳನ್ನು ಆರಂಭಿಸಬೇಕಾಗಿದೆ. ಕೇಂದ್ರ ಸರ್ಕಾರವು ಈ ವರ್ಷ ಹೆಸರುಕಾಳಿನ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 8682 ರೂ. ಎಂದು ನಿಗದಿ ಮಾಡಿದೆ. ಆದರೆ, ಸದ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಹೆಸರುಕಾಳಿನ ಬೆಲೆ 6 ಸಾವಿರ ರೂ. ಆಸುಪಾಸಿನಲ್ಲಿದೆ.

ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಖರೀದಿ ಕೇಂದ್ರಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಡಬೇಕಾಗಿದೆ.

ಕಳೆದ ವರ್ಷ ಮಾರ್ಕೆಟಿಂಗ್ ಫೆಡರೇಶನ್ ನಿಂದ ಪ್ರತಿ ಕ್ವಿಂಟಾಲ್ಗೆ 7755 ರೂ.ನಂತೆ ಸುಮಾರು 196 ಕೋಟಿ ರೂ. ಮೊತ್ತದ ಹೆಸರು ಕಾಳು ಖರೀದಿ ಮಾಡಲಾಗಿತ್ತು. 21883 ರೈತರಿಂದ 2.53 ಲಕ್ಷ ಕ್ವಿಂಟಾಲ್ ಹೆಸರು ಖರೀದಿಯಾಗಿತ್ತು. ಈ ಬಾರಿಯೂ ಶ್ರೀ ಪ್ರಕ್ರಿಯೆ ಆರಂಭಿಸಬೇಕೆಂಬ ಒತ್ತಾಯ ರೈತರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net