

ಭರಮಸಾಗರ: ಇಲ್ಲಿನ ದೊಡ್ಡಪೇಟೆ ಶ್ರೀ ರಾಘವೇಂದ್ರ ಕೃಪಾಶ್ರಮದಲ್ಲಿ ಗುರುರಾಯರ 352ನೇ ಆರಾಧನಾ ಮಹೋತ್ಸವ ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು.
ಹರಿಹರದ ವೇ.ಬ್ರ. ಶ್ರೀ ನಾಗಭೂಷಣ್‌ದೀಕ್ಷಿತ್, ಗುರುದೀಕ್ಷಿತ್ ನೇತೃತ್ವದಲ್ಲಿ ವೇದಮಂತ್ರ ಘೋಷದೊಂದಿಗೆ ನಾಗಭೂಷಣ್ ನಾಡಿಗೇರ್ ಮತ್ತು ಸಹೋದರರು ಸಂಕಲ್ಪ ಸಹಿತ ರಾಯರ ಆರಾಧನೆ ಧಾರ್ಮಿಕ ಕಾರ್ಯ ನಡೆಸಿದರು.
ಪೂರ್ವಾಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಬೃಂದಾವನಕ್ಕೆ, ಫಲ, ಪಂಚಾಮೃತ ಅಭಿಷೇಕ ನಡೆಸಲಾಯಿತು. ಸಂಜೆ ಮಹಿಳೆಯರಿಂದ ಭಜನೆ, ಅಷ್ಟಾವಧಾನ ಸೇವೆ ನಡೆದವು.
ಸೆ.1ರಂದು ಮಹಾ ಪಂಚಾಮೃತ ಅಭಿಷೇಕ, ಪಾದುಕಾ, ಭೂತಕಂಬ ಪೂಜೆ, ಗುರುಭಿಕ್ಷಾ, ಭಜನೆ, ಸೆ.2ರಂದು ಉತ್ತರ ಆರಾಧನಾ, ಸತ್ಯನಾರಾಯಣ ಪೂಜೆ ನಡೆಯಲಿದೆ.