ಚಿದಂಬರ ಅಧ್ಯಯನ ಪೀಠ ಸ್ಥಾಪಿಸಿ

Published on

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ಕೆಂಗೇರಿಯ ಚಿದಂಬರ ಸ್ವಾಮೀಜಿ ಅವರ ಕುರಿತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಚಿದಂಬರ ಅಧ್ಯಯನ ಪೀಠ ಸಿದ್ಧತಾ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ನಿಯೋಗದ ಸದಸ್ಯರು, ಉತ್ತರ ಕರ್ನಾಟಕದಲ್ಲಿ 19ನೇ ಶತಮಾನದಲ್ಲಿ ಸನಾತನ ಆಧ್ಯಾತ್ಮಿಕ ಹಾಗೂ ಧಾಮಿರ್ಕ ಕ್ರಾಂತಿ ಮಾಡಿ, ಇಂದಿಗೂ ಅಸಂಖ್ಯ ಭಕ್ತರನ್ನು ಹೊಂದಿರುವ ಸ್ವಾಮೀಜಿ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅಧ್ಯಯನ ಪೀಠ ಸ್ಥಾಪನೆ ಪ್ರಸ್ತಾವಕ್ಕೆ ರಾಜ್ಯ ಸರ್ಕಾರವು ಸಮ್ಮತಿ ಹಾಗೂ ಹಣಕಾಸು ನೆರವು ನೀಡಬೇಕೆಂದು ನಿಯೋಗವು ವಿನಂತಿಸಿತು. ಮನವಿ ಸ್ವೀಕರಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ನಿಯೋಗದಲ್ಲಿ ಡಾ. ಆರ್.ಕೆ. ಮುಳಗುಂದ, ಪ್ರೊ. ದುಷ್ಯಂತ ನಾಡಗೌಡ, ಮನೋಜ ಪಾಟೀಲ, ಪ್ರೊ. ಸಿ.ಆರ್. ಜೋಶಿ, ಶ್ರೀಪಾದ ಶಾಸ್ತ್ರೀಜಿ, ನರಸಿಂಹರಾವ್ ಸೋಮಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net