ಜಿಲ್ಲೆಯ ವಿವಿಧೆಡೆಯೂ ಶಾಖೆಗಳನ್ನು ಪ್ರಾರಂಭಿಸಿ

CTD 19 AHOBALA-AAA
Published on

ಚಿತ್ರದುರ್ಗ

ಗ್ರಾಹಕರಿಗೆ ನಗರದ ಶ್ರೀ ಅಹೋಬಲ ಟಿವಿಎಸ್‌ಶೋರೂಂ ಉತ್ತಮ ಸೇವೆ ಒದಗಿಸುತ್ತಿದೆ. ಆದ್ದರಿಂದ ಜಿಲ್ಲೆಯ ವಿವಿಧೆಡೆ ಶಾಖೆಗಳ ನ್ನು ಪ್ರಾರಂಭಿಸುವ ಮೂಲಕ ವಹಿವಾಟನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಶೋರೂಂ ಮಾಲೀಕ ಅರುಣ್ ಅ ವರಿಗೆ ಸಲಹೆ ನೀಡಿದರು.

ನಗರದ ಬಿಡಿ ರಸ್ತೆ(ಶಂಕರ್‌ಟಾಕೀಸ್)ಯಲ್ಲಿ ಸೋಮವಾರದಿಂದ ಡಿ.23ರವರೆಗೆ ಶ್ರೀ ಅಹೋಬಲ ಟಿವಿಎಸ್ ಶೋರೂಂ ಆಯೋಜಿ ಸಿರುವ ಮೆಗಾ ಎಕ್ಸ್ ಚೇಂಜ್ ಮತ್ತು ಸಾಲ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶತಮಾನದ ಇತಿಹಾಸ ಹೊಂದಿರುವ ಸ್ವದೇಶಿ ಕಂಪನಿ,ಟಿವಿಎಸ್ ಗುಣಮಟ್ಟದ ಮೋಟಾರು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತಿದೆ.

ಟಿವಿಎಸ್ ಎಕ್ಸ್‌ಎಲ್ ರೈತರ,ಶ್ರಮಿಕ,ಕಾರ್ಮಿಕ ವರ್ಗಕ್ಕೆ ಪ್ರೀತಿ ಪಾತ್ರವಾಗಿದೆ. ವಿಭಿನ್ನ ಮಾದರಿ ಬೈಕ್‌ಗಳನ್ನು ಉತ್ಪಾದಿಸುವುದರೊಂ ದಿಗೆ ಯುವ ಜನರ ಮನಸನ್ನು ಗೆದ್ದಿದೆ. ನಗರದ ಅಹೋಬಲ ಟವಿಎಸ್ ಶೋರೂಂ ಕಡಿಮೆ ಅವಧಿಯಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಶೋರೂಂ ಮಾಲೀಕ ಮಾಲೀಕ ಪಿ.ವಿ.ಅರುಣ್‌ಮಾತನಾಡಿ,ಎಲ್ಲ ಸಂದರ್ಭದಲ್ಲೂ ಶೋ ರೂಂಗೆ ಬಂದು ವಾಹನ ಪರಿಶೀಲಿಸಿ ಖ ರೀದಿಸಲು ಗ್ರಾಹಕರಿಗೆ ಸಮಯ ಇರುವುದಿಲ್ಲ. ಆದ್ದರಿಂದ ಏರ್ಪಡಿಸಿರುವ ಈ ಮೇಳವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳ ಬೇಕೆಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್,ಸದಸ್ಯ ಮಲ್ಲಿಕಾರ್ಜುನ್,ಟಿವಿಎಸ್ ಕಂಪನಿ ಅಧಿಕಾರಿಗಳಾದ ಸಾಯಿಕೃಷ್ಣ, ಉಮಾ,ಮುತ್ತು, ಶೋರೂಂ ಮ್ಯಾನೇಜರ್ ವಿದ್ಯಾಧರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net