

ಜಮಖಂಡಿ:ನಗರದ ಅಂಚೆ ಕಚೇರಿಯಲ್ಲಿ ಮೊದಲಿನಂತೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪೋಸ್ಟ್ ಮಾಸ್ಟರ್ ಎಸ್.ಎಸ್. ಮನ್ನಿಕೇರಿ ಅವರಿಗೆ ರೈಲ್ವೆ ಪ್ರಯಾಣಿಕರು ಮನವಿ ಪತ್ರ ಸಲ್ಲಿಸಿದರು.ಕಳೆದ ಕೆಲವು ತಿಂಗಳುಗಳಿಂದ ಅಂಚೆ ಕಚೇರಿಯಲ್ಲಿದ್ದ ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ನ್ನು ಬಂದ್ ಮಾಡಿದ್ದರಿಂದ ರೈಲ್ವೆ ಪ್ರಯಾಣಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಕೂಡಲೇ ಕೌಂಟರ್ ಪ್ರಾರಂಭಿಸಿ ಪ್ರಯಾಣಿಕರಿಗೆ ಅನಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಉಮೇಶ ಕೊಠಾರಿ, ರಮೇಶ್ ಮೆಹ್ತಾ, ಮುಖೇಶ್ ಜೈನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್, ಕಿರಣ್ ಓಸ್ವಾಲ್, ರಾಜೇಶ್ ಓಸ್ವಾಲ್, ನರೇಂದ್ರ ಭಂಡಾರಿ, ಮಂದರ್ ಓಸ್ವಾಲ್, ಪಿಂಟು ಓಸ್ವಾಲ್, ದರ್ಶನ್ ಓಸ್ವಾಲ್, ರಾಜೇಶ್ ಜೈನ್, ರಾಮದೇವ್ ವರ್ಮಾ, ಗೌರವ್ ವರ್ಮಾ ಇತರರು ಇದ್ದರು.
ಜಮಖಂಡಿ ನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಪುನ@ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಪೋಸ್ಟ್ ಮಾಸ್ಟರ್ ಎಸ್.ಎಸ್. ಮನ್ನಿಕೇರಿ ಅವರಿಗೆ ರೈಲ್ವೆ ಪ್ರಯಾಣಿಕರು ಮನವಿ ಪತ್ರ ಸಲ್ಲಿಸಿದರು. ಉಮೇಶ್ ಕೊಠಾರಿ, ರಮೇಶ್ ಮೆಹ್ತಾ, ಮುಖೇಶ್ ಜೆನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್ ಇತರರು ಇದ್ದಾರೆ.