ಕಂಪ್ಲಿಯಲ್ಲಿಯೇ ಬಿಇಒ ಕಚೇರಿ ಆರಂಭಿಸಿ

31 KMP 03
Published on

ಕಂಪ್ಲಿ: ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆಯುವಂತೆ ಆಗ್ರಹಿಸಿ, ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶ್‌ಗೆ ಶನಿವಾರ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ ಮಾತನಾಡಿ, ಕಂಪ್ಲಿಯಲ್ಲಿ ಬಿಇಒ ಕಚೇರಿ ತೆರೆಯುವಂತೆ ಕಲಬುರಗಿ ಶಾಲಾಶಿಕ್ಷಣ ಇಲಾಖೆ ವಿಭಾಗದ ಅಪರ ಆಯುಕ್ತರು 2025ರ ಏ.23ರಂದು ಸುತ್ತೋಲೆ ಹೊರಡಿಸಿ, ಬಿಇಒ ಕಚೇರಿ ಆರಂಭಿಸುವಂತೆ ಸೂಚಿಸಿದ್ದಾರೆ. ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ್ದು, ವಿಜಯನಗರ ಜಿಲ್ಲೆಯಿಂದ ಬೇರ್ಪಟ್ಟು ಆಡಳಿತಾತ್ಮಕವಾಗಿ ಜಿಲ್ಲೆಯ ಪಶ್ಚಿಮ ವಲಯ ಕುರುಗೋಡು ತಾಲೂಕಿಗೆ ಸೇರ್ಪಡೆಗೊಂಡಿದ್ದೇವೆ.

ಕಂಪ್ಲಿ ಕಂದಾಯ ತಾಲೂಕು ಆಗಿ ಅನೇಕ ವರ್ಷಗಳಾದರೂ ತಾಲೂಕು ಕೇಂದ್ರದಲ್ಲಿ ಬಿಇಒ ಕಚೇರಿ ಆರಂಭಿಸಿಲ್ಲ. ಬಿಇಒ ಕಚೇರಿ ಕಂಪ್ಲಿಯಿಂದ 30ಕಿ.ಮಿ.ದೂರದ ಕುರುಗೋಡು ತಾಲೂಕಿಗೆ ವರ್ಗಾವಣೆಗೊಂಡಿದ್ದು ಸಾರಿಗೆ ವ್ಯವಸ್ಥೆ ಕಡಿಮೆ ಇದೆ. ಕಂಪ್ಲಿಯಲ್ಲಿಯೇ ಬಿಇಒ ಕಚೇರಿ ಆರಂಭದಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಸುನಿತಾ ಪೂಜಾರಿ, ಜಿಪಿಟಿ ಅಧ್ಯಕ್ಷ ಮಂಜುನಾಥ, ಇಸಿಒ ರೇವಣ್ಣ, ಶಿಕ್ಷಕರಾದ ಚಂದ್ರಶೇಖರ್, ವಸಂತ, ಮರಿಸ್ವಾಮಿ, ಮಲ್ಲಿಕಾರ್ಜುನ, ರವಿ, ವೀರೇಶ, ಅನುದಾನಿತ ಶಾಲಾ ಶಿಕ್ಷಕ ಅಂಬಿಗರ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net