

ಗಂಗಾವತಿ: ತಾಲೂಕಿನ ಬಸಾಪಟ್ಟಣದಲ್ಲಿ ಆಧಾರ ಸೇವಾ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಎಪಿಜಿ ಅಬ್ದುಲ್ ಕಲಾಂ ಸೇವಾ ಟ್ರಸ್ಟ್ ಸದಸ್ಯರ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಆಧಾರ ಸೇವಾ ಕೇಂದ್ರ ಬಂದ್
ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಬಸಾಪಟ್ಟಣ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸುತ್ತಲಿನ ಗ್ರಾಮಸ್ಥರು ವಿವಿಧ ಕಾರ್ಯಗಳಿಗೆ ಗ್ರಾಮವನ್ನೇ ಅವಲಂಭಿಸಿದ್ದಾರೆ. ಆಧಾರ ಸೇವಾ ಕೇಂದ್ರ ಇಲ್ಲದಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ವೆಂಕಟಗಿರಿಗೆ ಹೋಗುವ ಸ್ಥಿತಿ ಎದುರಾಗಿದೆ. ಕೂಡಲೇ ಆಧಾರ ಸೇವಾ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದರು.
ಪ್ರಮುಖರಾದ ಶಾಮೀದ್ ಅಲಿ ಹುಲಿಹೈದರ್, ಕನಕಪ್ಪ ಹುಡೇಜಾಲಿ, ದಾದಾಪೀರ್ ಆರಾಳ್, ಮಹೆಬೂಬ್‌ಸಾಬ್, ಸೋಮನಾಥ ವಡ್ಡರಟ್ಟಿ, ಬಸವರಾಜ ಬಿಜ್ಕಲ್, ಗಂಗಾಧರ ಪೂಜಾರ್ ಇತರರಿದ್ದರು.