

ಹುಬ್ಬಳ್ಳಿ: ನಗರದಿಂದ ದೇಶದ ವಿವಿಧ ಭಾಗಗಳಿಗೆ ಶೀಘ್ರದಲ್ಲೇ ಸ್ಟಾರ್‌ಏರ್‌ಲೈನ್ಸ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಘೋಡಾವತ್ ಗ್ರೂಪ್ ಅಧ್ಯಕ್ಷ ಸಂಜಯ ಘೋಡಾವತ್ ಭರವಸೆ ನೀಡಿದ್ದಾರೆ.
ಇಲ್ಲಿಯ ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಸೋಮಾಪುರ, ಸುನಿಲ ನಲವಡೆ, ಕೌಸ್ತುಭ ಸಂಶೀಕರ, ಮಹೇಂದ್ರ ಸಿಂಘಿ ಅವರು ಸಂಜಯ ಘೋಡಾವತ್ ಅವರನ್ನು ಇತ್ತೀಚೆಗೆ ಭೇಟಿಯಾಗಿ, ಅಹಮದಾಬಾದ್, ಹುಬ್ಬಳ್ಳಿಯಿಂದ ಜೋಧಪುರ, ತಿರುಪತಿ ಮತ್ತಿತರ ವಲಯಗಳಿಗೆ ಸ್ಟಾರ್ ವಿಮಾನಯಾನ ಆರಂಭಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅವರು ಶೀಘ್ರದಲ್ಲೇ ಕಾರ್ಯಾಚರಣೆ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.