

ರಾಮದುರ್ಗ: ಇಲ್ಲಿನ ಪುರಸಭೆಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಸಿದ್ರಾಮಪ್ಪ ಬೆಂಬಳಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ, ಸದಸ್ಯರಾದ ರಘುನಾಥ ರೇಣಕೆ, ನಾಗರಾಜ ಕಟ್ಟಿಮನಿ, ಶಂಕರ ಬೆನ್ನೂರ, ಮಂಜುನಾಥ ರಾವಳ, ಶಂಕರ ಸೂಳಿಬಾಂವಿ, ನೀತಾ ಬೀಳಗಿ, ಹುಸೇನಸಾಬ್ ಐನಾಪೂರ, ಮುಖ್ಯಾಕಾರಿ ಈರಣ್ಣ ಗುಡದಾರಿ ಇತರರಿದ್ದರು.