ಮಂಗಳೂರು ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಅಂಚೆ ಚೀಟಿಗಳ ಪ್ರದರ್ಶನ ಆರಂಭ

mng-july13-stamp2
ಮಂಗಳೂರು ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್ನ ನೆಲಮಹಡಿಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಅಂಚೆ ಚೀಟಿ ಸಂಗ್ರಹ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್, ಸೀನಿಯರ್ ಪೋಸ್ಟ್ ಮಾಸ್ಟರ್ ಶ್ರೀನಾಥ್, ಹಿರಿಯ ಅಂಚೆ ಚೀಟಿ ಸಂಗ್ರಹಕರಾದ ವಿದ್ಯಾ ಬಾಗಲೋಡಿ ಅವರು ಉದ್ಘಾಟಿಸಿದರು. ಫಿಜಾ ಬೈ ನೆಕ್ಸಸ್ ಮಾಲ್ನ ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) ಶ್ರೀನಿಧಿ ಉಪಸ್ಥಿತರಿದ್ದರು.
Published on

ಮಂಗಳೂರು: ನಗರದ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್ ನ ನೆಲಮಹಡಿಯಲ್ಲಿ ಎರಡು ದಿನಗಳ ಅಂಚೆ ಚೀಟಿ ಸಂಗ್ರಹ ಮತ್ತು ಪ್ರದರ್ಶನ ಕಾರ್ಯಕ್ರಮ ಶನಿವಾರ ಆರಂಭಗೊಂಡಿತು. ಭಾನುವಾರ ರಾತ್ರಿ ಒಂಭತ್ತು ಗಂಟೆಯ ತನಕ ಈ ಪ್ರದರ್ಶನ ನಡೆಯಲಿದೆ.
ಈ ಸಂದರ್ಭ ಮಾತನಾಡಿದ ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀವಾಸ್ತವ್ ಅವರು, ಹವ್ಯಾಸಿಗಳಿಗೆ ಇದೊಂದು ಸ್ಪೂರ್ತಿದಾಯಕ ಮತ್ತು ನೆನಪಿನ ಕಾರ್ಯಕ್ರಮವಾಗಿದೆ. ವೈಯಕ್ತಿಕವಾಗಿ ನನಗೂ ಇದು ಖುಷಿ ಕೊಡುವ ಸಂಗತಿ. ಮಂಗಳೂರಿನ ಪಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ಜಗತ್ತಿನ ಹೆಸರುವಾಸಿ ಬ್ರಾಂಡುಗಳು ತನ್ನ ಮಳಿಗೆಗಳನ್ನು ಹೊಂದಿವೆ. ಅಂತಾರಾಷ್ಟ್ರೀಯ ಮಟ್ಟದ ಅನುಭವ ನೀಡುವ ಫಿಜಾ ಮಾಲ್ ನಲ್ಲಿ ವಿಶೇಷವಾದ ಫುಡ್ ಕೋರ್ಟ್ ಇದೆ. ಸಿನಿಮಾ ಮನರಂಜನೆ ಇದೆ. ಹೀಗಾಗಿ ಇದು ಜನಾಕರ್ಷಣೆಯ ಕೇಂದ್ರವಾಗಿದೆ ಎಂದರು.
ಪಾಂಡೇಶ್ವರ ಹೆಡ್ ಪೋಸ್ಟ್ ಆಪೀಸ್‌ನ ಸೀನಿಯರ್ ಪೋಸ್ಟ್ ಮಾಸ್ಟರ್ ಶ್ರೀನಾಥ್ ಅವರು ಮಾತನಾಡಿ, ಫಿಜಾ ನೆಕ್ಸಸ್ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷ . ಮನೆ ಮಕ್ಕಳಲ್ಲಿ ಈ ಹವ್ಯಾಸವನ್ನು ಮತ್ತೆ ನೆನಪಿಸುವುದು ಈ ಕಾರ್ಯಕ್ರಮದ ಉದ್ದೇಶ. ಮಂಗಳೂರಿನ ಜನತೆ ಈ ಒಂದು ಅಪರೂಪದ ಕಾರ್ಯಕ್ರಮಗಳನ್ನು ಕುಟುಂಬ ಸಮೇತ ಬಂದು ನೋಡಿ ಆಸ್ವಾದಿಸಬೇಕು ಎಂದರು.
ಅಂಚೆ ಚೀಟಿ ಸಂಗ್ರಹ ಮಾಡಿ ಹೆಸರುವಾಸಿಯಾದ ವಿದ್ಯಾ ಬಾಗ್ಲೋಡಿ ಮಾತನಾಡಿ ಸ್ಟ್ಯಾಂಪ್ ಒಂದು ಸಣ್ಣ ಅಂಟಿಸುವ ಕಾಗದ ತುಂಡು ಆಗಿರಬಹುದು. ಆದರೆ ನಿಜವಾಗಿ ಇದು ಇತಿಹಾಸವನ್ನು ಹೇಳುವ ಮಹಾಪ್ರಬಂಧ ಎಂದರು.
ಅಂಚೆ ಚೀಟಿ ಸಂಗ್ರಹಕ ಕಿಶೋರ್ ಬಾಗ್ಲೋಡಿ, ಫಿಜಾ ಬೈ ನೆಕ್ಸಸ್ ಮಾಲ್ನ ಅಸಿಸ್ಟೆಂಟ್ ಮ್ಯಾನೇಜರ್ (ಮಾರ್ಕೆಟಿಂಗ್) ಶ್ರೀನಿಧಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net