

ಹಿರಿಯೂರು: ಸ್ವಾತಂತ್ರ್ಯ ಹೋರಾಟಗಾರರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರಿ ಹೊರುವ ಪಣ ತೊಡಬೇಕೆಂದು ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಆರ್ ಪ್ರೌಢಶಾಲೆಯಲ್ಲಿ ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪರಕೀಯರ ದಾಸ್ಯದಿಂದ ವಿಮುಕ್ತಿ ಪಡೆದು, ಸ್ವತಂತ್ರ ಭಾರತದ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನು ನಾವು ಸದಾ ಸ್ಮರಿಸಬೇಕು. ಸಶಕ್ತ ಮತ್ತು ಸಂಪದ್ಭರಿತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಸನ್ನದ್ಧರಾಗಬೇಕೆಂದು ತಿಳಿಸಿದರು.
ಶ್ರೀ ಶಿವಮುನಿ ಸ್ವಾಮೀಜಿ, ಶ್ರೀ ಬ್ರಹ್ಮಾನಂದಮುನಿ ಸ್ವಾಮೀಜಿ, ಮಠದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಜೆ.ಆರ್ ಸುಜಾತಾ, ಕೃಷ್ಣಪ್ಪ, ತಿಮ್ಮಪ್ಪ, ಸುರೇಂದ್ರ, ಡಿ.ಶಬೀನಾ, ಚೇತನ್ ಇದ್ದರು.
ಕೆ.ಸಿ.ರೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಮಕ್ಕಳು ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೇರಿ ನಡೆಸಿದರು. ಮುಖ್ಯಶಿಕ್ಷಕ ಬಿ.ಜಗದೀಶ್, ಸಹಶಿಕ್ಷಕಿ ಜೆ.ಜೆ.ಪಲ್ಲವಿ, ಗ್ರಾಪಂ ಸದಸ್ಯ ಗುರುಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿದ್ದೇಶ್, ನಿವೃತ್ತ ಮುಖ್ಯಶಿಕ್ಷಕ ಬಸವರಾಜಪ್ಪ ಇದ್ದರು.
ಐಮಂಗಲ ನಾಡ ಕಚೇರಿ: ಉಪ ತಹಸೀಲ್ದಾರ್ ಆರ್.ಮಂಜಪ್ಪ, ಕಂದಾಯ ನಿರೀಕ್ಷಕ ಎಂ.ಆರ್.ಗೋಪಿ, ಸ್ವಾಮಿ, ಸತೀಶ್, ಚೈತ್ರಾ, ನಂದಿನಿ, ಮೇಘನಾ, ಅಮರ್‌ನಾಥ್, ಗಾಯಿತ್ರಿ, ಜಯಮ್ಮ, ಕೆಂಚಪ್ಪ ಇತರರಿದ್ದರು.
ಐಮಂಗಲ ಗ್ರಾಪಂ: ಗ್ರಾಪಂ ಅಧ್ಯಕ್ಷ ಎಸ್.ಎನ್.ಮೂರ್ಕಣಪ್ಪ, ಪಿಡಿಒ ಎಂ.ಶಶಿಕಲಾ ಇದ್ದರು.