ರಂಗಗೀತೆ ಪ್ರಸ್ತುತಿ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎ. ಮುರಿಗೆಪ್ಪ ದತ್ತಿ ನಿಮಿತ್ತ ಜೂ. 7ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಹುಬ್ಬಳ್ಳಿಯ ರಂಗ ಕಲಾವಿದೆ ಪುಷ್ಪಮಾಲಾ ಅಣ್ಣಿಗೇರಿ ಅವರಿಂದ ರಂಗ ಗೀತೆಗಳನ್ನು ಏರ್ಪಡಿಸಿದೆ.

ಶಿರೂರಿನ ರಂಗ ಕಲಾವಿದ ಬಸವರಾಜ ಬೆಂಗೇರಿ ಅತಿಥಿಯಾಗಿ ಆಗಮಿಸುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಡಾ. ಎ. ಮುರಿಗೆಪ್ಪ ಮತ್ತು ಲೀಲಾ ಮುರಿಗೆಪ್ಪ ಉಪಸ್ಥಿತರಿರುವರು. ಸಾಹಿತಿಗಳು, ಚಿಂತಕರು, ಕಲಾವಿದರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net