ರಂಗ ಗೌರವ ಸಮಾರಂಭ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ನಿಮಿತ್ತ ಮಾ. 27ರಂದು ಸಂಜೆ 6 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ, ರಂಗ ಗೌರವ ಸಮಾರಂಭ ಏರ್ಪಡಿಸಿದೆ.

ಸ್ತ್ರೀ ಸಂಗೀತ ನಾಟಕ ಮಂಡಳಿಯ ಪರವಾಗಿ ಶಾರದಮ್ಮ ಹೊಂಬಳ, ಗದಗ ಹಾಗೂ ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟ್ಯ ಸಂಘದ ಪರ ವಿಜಯಲಕ್ಷ್ಮೀ ಹಿರೇಮಠ ರಂಗ ಗೌರವ ಸ್ವೀಕರಿಸುವರು. ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಪ್ರಶಸ್ತಿ ಪ್ರದಾನ ಮಾಡುವರು. ಮಹ್ಮದಲಿ ಹೊಸೂರ ಹಾಗೂ ಗಣೇಶ ಅಮೀನಗಡ ಅಭಿನಂದನಾ ನುಡಿಗಳನ್ನಾಡುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.

ಬೆಂಗಳೂರಿನ ಡಾ. ಬಸವರಾಜ ಏಣಗಿ, ಬಸವರಾಜ ಬೆಂಗೇರಿ, ಡಾ. ವೀರಣ್ಣ ರಾಜೂರ, ಡಾ. ಬಸವರಾಜ ಜಗಜಂಪಿ, ಡಾ. ರಾಮಕೃಷ್ಣ ಮರಾಠೆ, ಡಾ.ಪಿ.ಜಿ. ಕೆಂಪಣ್ಣವರ, ಶಿರೀಷ ಜೋಶಿ, ಡಾ. ಶಶಿಧರ ನರೇಂದ್ರ, ಡಾ. ಪ್ರಕಾಶ ಗರುಡ, ಸುನಂದಾ ಹೊಸಪೇಟೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net