ಸಚಿವರಿದ್ದ ಕಾರ್ಯಕ್ರಮದ ಸ್ಟೇಜ್ ಕುಸಿತ; ನದಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ್ರು ಸಚಿವರು ಮತ್ತಿತರರು..

Stage
ವೇದಿಕೆಗೆ ಆಗಮಿಸುತ್ತಿರುವ ಸಚಿವರು
Published on

ಮಂಗಳೂರು: ಉತ್ಸವವೊಂದರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆ ದಿಢೀರ್ ಕುಸಿದಿದ್ದು, ರಾಜ್ಯದ ಸಚಿವರು ಹಾಗೂ ಇತರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ವೇದಿಕೆಯನ್ನು ನದಿಯ ಪಕ್ಕದಲ್ಲೇ ಹಾಕಲಾಗಿದ್ದರಿಂದ ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ದುರಂತ ಸಂಭವಿಸಿರಬಹುದಾದ ಸಾಧ್ಯತೆ ಇತ್ತು.

ಮಂಗಳೂರಿನ ಸಸಿಹಿತ್ಲು ಸಮೀಪದ ನಂದಿನಿ ನದಿ ಹತ್ತಿರ ಈ ಘಟನೆ ನಡೆದಿದೆ. ಇಂದು ಆರಂಭವಾಗಿರುವ ಎರಡು ದಿನಗಳ ನಂದಿನಿ ಉತ್ಸವದ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ನಂದಿನಿ ನದಿ ಉತ್ಸವದ ಪ್ರಯುಕ್ತ ನಂದಿನಿಗೆ ಆರತಿ ಬೆಳಗಲು ನದಿ ಪಕ್ಕದಲ್ಲೇ ಸ್ಟೇಜ್ ಹಾಕಲಾಗಿತ್ತು.

ಸಚಿವ ಸಿ.ಪಿ.ಯೋಗೀಶ್ವರ್​ ಉದ್ಘಾಟನೆಗೆ ಮುಂದಾದಾಗ ಅವರೊಂದಿಗೆ ಹೆಚ್ಚು ಜನರು ವೇದಿಕೆ ಮೇಲೆ ನಿಂತಿದ್ದರಿಂದ ಅದು ಕುಸಿದಿದೆ. ಸ್ಟೇಜ್ ನದಿ ಭಾಗಕ್ಕಿಂತ ಹಿಂಬದಿಗೆ ಮುರಿದು ಬಿದ್ದ ಪರಿಣಾಮ ಸಚಿವರು ಸೇರಿ ಇತರ ಗಣ್ಯರು ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net