ಗ್ರಾಪಂ ಸಿಬ್ಬಂದಿ ರಾಜೀನಾಮೆ ವಾಪಸ್

panchayith
Published on

ಹೆಬ್ರಿ: ಬೈರಂಪಳ್ಳಿ ಗ್ರಾಪಂನ ಮೂವರು ಸಿಬ್ಬಂದಿಯ ರಾಜೀನಾಮೆ ಪ್ರಕರಣಕ್ಕೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಗುರುವಾರ ಸಂಧಾನದ ಮೂಲಕ ಸುಖಾಂತ್ಯ ಹಾಡಿದ್ದಾರೆ.

ಸಿಬ್ಬಂದಿಯಿಲ್ಲದೆ ಬುಧವಾರ ಮಧ್ಯಾಹ್ನದ ತನಕ ಪಂಚಾಯಿತಿ ಬಂದ್ ಆಗಿತ್ತು. ಸಾರ್ವಜನಿಕರು ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಾಗ ಸಂಬಂಧಪಟ್ಟವರು ಜಾಗೃತಿಗೊಂಡು ಪಂಚಾಯಿತಿಗೆ ದೌಡಾಯಿಸಿ ತೆರೆದಿದ್ದರು.

ಮೇಲಧಿಕಾರಿಗಳ ಮಾತಿಗೆ ಒಪ್ಪಿ ರಾಜೀನಾಮೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ಮೂವರು ಸಮ್ಮತಿಸಿದ್ದೇವೆ. ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗಬಾರದು ಎಂದು ರಾಜೀನಾಮೆ ನೀಡಿದ ಸಿಬ್ಬಂದಿ ಮನೋಹರ್ ತಿಳಿಸಿದರು.

ನಾನು ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದೇನೆ. ಅವರೆಲ್ಲರೂ ಕರ್ತವ್ಯಕ್ಕೆ ಹಾಜರಾಗಲು ಒಪ್ಪಿಗೆ ನೀಡಿದ್ದಾರೆ. ಶೀಘ್ರದಲ್ಲಿ ರಾಜೀನಾಮೆ ಹಿಂಪಡೆದು, ಕರ್ತವ್ಯಕ್ಕೆ ಹಾಜರಾಗುತ್ತಾರೆಂಬ ಭರವಸೆ ಇದೆ. -ಪ್ರತೀಕ್ ಬಾಯಲ್, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ https://www.vijayavani.net/commemoration-at-radha-shenoy-school https://www.vijayavani.net/humanity-of-ishwar-malpe-udupi

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net