ಕೋತಿಯ ಉಪಟಳಕ್ಕೆ ಬೇಸತ್ತ ಸಿಬ್ಬಂದಿ

ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಕೋತಿ ಸೆರೆಗೆ ಬೋನು ಅಳವಡಿಸಿರುವುದು.
ಕಂಪ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಕೋತಿ ಸೆರೆಗೆ ಬೋನು ಅಳವಡಿಸಿರುವುದು.
Published on

ಕಂಪ್ಲಿ: ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿಗೆ ತೊಂದರೆ ನೀಡುತ್ತಿರುವ ಕರಿಕೋತಿ ಸೆರೆಗೆ ಬೋನು ಅಳವಡಿಸಿದ್ದು, ಕೋತಿ ಬೋನಿಗೆ ಬೀಳದೆ ಸತಾಯಿಸುತ್ತಿದೆ. ತರಬೇತಿ ಕೇಂದ್ರದ ಸಾಮಗ್ರಿಗಳನ್ನು ಎಸೆದು ಹಾಳು ಮಾಡುತ್ತಿದೆ.

ಕನ್ನಡಿ, ಗಾಜಿನ ಬಾಗಿಲು, ಕಿಟಕಿ ಒಡೆದು ಹಾಕಿದೆ. ಕಂಪ್ಯೂಟರ್ ಎಸೆದಿದೆ. ಹ್ಯಾಂಡ್ ವಾಶ್, ವಸತಿ ನಿಲಯದ, ಆರ್.ಒ.ಪ್ಲಾಂಟ್ ಪೈಪ್‌ಗಳು ಸೇರಿ ಹಲವು ವಸ್ತುಗಳನ್ನು ಹಾನಿ ಮಾಡಿದೆ. ಪ್ರತಿಬಿಂಬ ಕಾಣುವ ವಸ್ತುಗಳನ್ನು ಹಾಳು ಮಾಡುತ್ತಿದೆ. ಮನುಷ್ಯರ ಮೈಮೇಲೆ ಬಿದ್ದು ಕಚ್ಚಲು ಬರುತ್ತಿದೆ. ಕೋತಿಯ ಉಪಟಳಕ್ಕೆ ಬೇಸತ್ತ ಸಿಬ್ಬಂದಿ ಅರಣ್ಯ ಇಲಾಖೆ ಮೊರೆ ಹೋಗಿದ್ದರು.

ಹೊಸಪೇಟೆಯ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಕಳೆದ ನಾಲ್ಕು ದಿನಗಳ ಹಿಂದೆ ಕೋತಿ ಸೆರೆಗೆ ಬೋನು ಅಳವಡಿಸಿದ್ದಾರೆ. ಬೋನಿನಲ್ಲಿಟ್ಟ ಬಾಳೆಹಣ್ಣು ತಿನ್ನಲು ಹತ್ತಿರ ಬರುತ್ತಿದೆ. ಆದರೆ ಒಳಗೆ ಹೋಗುತ್ತಿಲ್ಲ. ಕೋತಿ ಬೋನಿನ ಒಳಗೆ ಹೋದರೆ ತಕ್ಷಣ ಬಾಗಿಲು ಮುಚ್ಚುವ ಹಗ್ಗ ಎಳೆಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net