ಗಜೇಂದ್ರಗಡಕ್ಕೆ ಕ್ರೀಡಾಂಗಣ ಮಂಜೂರು

stadium-sanctioned-for-gajendragad
Published on

ಗಜೇಂದ್ರಗಡ: ಗಜೇಂದ್ರಗಡ ತಾಲೂಕಿಗೆ ಕ್ರೀಡಾಂಗಣ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಾಡಳಿತದ ಕಚೇರಿ ಕಟ್ಟಡಕ್ಕೂ ಅನುದಾನ ದೊರೆಯಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಗೋಗೇರಿ ಗ್ರಾಮದಲ್ಲಿ ಗುರುವಾರ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಅಭಿವೃದ್ಧಿ ನನ್ನ ಧ್ಯೇಯವಾಗಿದೆ. ಗಜೇಂದ್ರಗಡ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಚಾಲ್ತಿಯಲ್ಲಿದೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ನಿರ್ಮಾಣ ಕಾಮಗಾರಿ ಪ್ರಾರಂಭಿಕ ಹಂತದಲ್ಲಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೋರ್ಪಡೆ, ಕೆ.ಎಸ್. ಕೊಡತಗೇರಿ, ಮುರ್ತುಜಾ ಡಾಲಾಯತ್, ಮಲ್ಲಿಕಾರ್ಜುನ ಗಾರಗಿ, ಕೆ.ಕೆ. ಬಾಗವಾನ, ಯಲ್ಲಪ್ಪ ಬಂಕದ, ಹೇಮಾಪತಿ ಭೋಸಲೆ, ಹನಮಪ್ಪ ಹೊರಪೇಟಿ, ಇಮಾಮಸಾಬ್ ಬಾಗವಾನ, ಕಟ್ಟೆಪ್ಪ ಮಾದರ, ಮಲ್ಲಪ್ಪ ಭೋಸಲೆ, ರಾಜು ಚೋಪಡೆ, ಕಳಕಪ್ಪ ಮಾದರ, ಉಮೆಶ ಅಳವಂಡಿ, ಅಲ್ಲಾಭಕ್ಷಿ ಭಾಗವಾನ, ಐ.ಎಚ್. ಬಾಗವಾನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net