ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ಶೀಘ್ರ

Maski mla
ಮಸ್ಕಿಯ ವೆಂಕಟಾಪುರ ರಸ್ತೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಿದ ಸ್ಥಳವನ್ನು ಶಾಸಕ ಬನಸಗೌಡ ತುರ್ವಿಹಾಳ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ನಾರಾಯಣಪ್ಪ ಕಾಸ್ಲಿ, ಪುರಸಭೆ ಸದಸ್ಯ ಶಬ್ಬೀರ್, ಬಸವರಾಜ ಕೊಠಾರಿ ಇತರರಿದ್ದರು.
Published on

ಮಸ್ಕಿ: ತಾಲೂಕಿನ ಕ್ರೀಡಾಪಟುಗಳಿಗಾಗಿ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲು ಸ್ಥಳ ಗುರುತಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ವೆಂಕಟಾಪುರ ರಸ್ತೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗುರುತಿಸಿದ 5 ಎಕರೆ ಜಾಗವನ್ನು ಪರಿಶೀಲಿಸಿ ಮಾತನಾಡಿದರು. ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ ಐದು ಕೋಟಿ ರೂ.ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತದೆ. ಸಂಬಂಧಿಸಿದ ಸಚಿವರು ಹಣ ಬಿಡುಗಡೆ ಪತ್ರ ಕೊಟ್ಟಿದ್ದು, ಅಂದಾಜು ಪಟ್ಟಿ, ನೀಲಿನಕ್ಷೆ ತಯಾರಿಸಲು ಧಾರವಾಡದ ಧಾತ್ರಿ ಟೆಕ್ನಿಕಲ್ ಕನ್ಸಲ್ಟೆನ್ಸಿ ಕಂಪನಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಸುಂಕನೂರು, ನಾರಾಯಣಪ್ಪ ಕಾಸ್ಲಿ, ಪುರಸಭೆ ಸದಸ್ಯ ಶಬ್ಬೀರ್, ಮಲ್ಲಯ್ಯ ಮುರಾರಿ, ಬಸವರಾಜ ಕೊಠಾರಿ, ಅಶೋಕ ಮುರಾರಿ, ಸಿದ್ದು ಮುರಾರಿ, ಆನಂದ ವೀರಾಪುರ, ಕಿರಣ ಮುರಾರಿ, ಗ್ರಾಮ ಆಡಳಿತಾಧಿಕಾರಿ ಮಹಾಂತೇಶ ಹಾಗೂ ಗಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net