ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ

oplus_2
oplus_2
Published on

ರಾಮದುರ್ಗ: ತಾಲೂಕಿನಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಪಟ್ಟಣದಲ್ಲಿ ಒಳಾಂಗಣ ಸೇರಿ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭರವಸೆ ನೀಡಿದರು.

ತಾಲೂಕಿನ ಚಂದರಗಿ ಕ್ರೀಡಾಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಸೋಲು&ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಆಟದ ಜತೆಗೆ ಪಾಠದತ್ತಲೂ ಗಮನಹರಿಸಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಸುರೇಂದ್ರ ಕಾಂಬಳೆ, ಸಂಜಯ ಹಳ್ಳಿ ಮಾತನಾಡಿದರು. ಗ್ರಾಪಂ ಉಪಾಧ್ಯೆ ವಿಜಯಾ ಬನ್ನೂರ, ಸ್ಪೋಕೋ ಸಂಸ್ಥೆ ಉಪಾಧ್ಯ ಮಹೇಶ ಭಾತೆ, ಎಸ್​.ವೈ.ಸಣ್ಣಿ, ಪಿ.ಡಿ.ಕಾಲವಾಡ, ಎಸ್​.ಬಿ.ಏಣಿ, ಎನ್​.ಜಿ.ಭಜಂತ್ರಿ, ಎಂ.ಎಸ್​.ನಿಜಗುಲಿ, ಎಂ.ಎಸ್​.ಮೇಟಿ, ಪಾಂಡುರಂಗ ಜಟಗನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net