ಚೂರಿ ಇರಿದ ಆರೋಪಿ ಬಂಧನ

3
ಹಲ್ಲೆಗೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತ ರವಿಕುಮಾರ್.
Published on

ಮಾಲೂರು: ಜಗಳ ಬಿಡಿಸಲು ಹೋದ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪದಲ್ಲಿ ಸೈಯದ್ ವಸೀನ್ ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ದೇವರಾಜ್ ತಿಳಿಸಿದರು.

ಪ್ರಕರಣವೇನು?: ಪಟ್ಟಣದ ಗೋಲ್ಡ್ ರಂಗಪ್ಪ ರಸ್ತೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರವಿಕುಮಾರ್ ಎಂಬುವರ ಹೋಂ ಅಪ್ಲೆಯನ್ಸ್‌ಸ್ ಮುಂಭಾಗ ಶನಿವಾರ ಮಧ್ಯಾಹ್ನ ಇಬ್ಬರು ಹುಡುಗರು ಬೈಕ್ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಜಗಳವಾಡುತ್ತಿದ್ದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಂಗಡಿಯಲ್ಲಿದ್ದ ರವಿಕುಮಾರ್ ಇದನ್ನು ಗಮನಿಸಿ ಹುಡುಗರಿಗೆ ಬುದ್ದಿಹೇಳಿ ಜಗಳ ಬಿಡಿಸಲು ಹೋಗಿದ್ದರು. ಈ ವೇಳೆ ಚಾಕುವಿನಿಂದ ರವಿಕುಮಾರ್ ಅವರ ಕಿವಿ ಮತ್ತು ಕೈಗೆ ಆರೋಪಿಗಳು ಇರಿದಿದ್ದಾರೆ.

ಕ್ರಮದ ಭರವಸೆ: ಘಟನೆ ಖಂಡಿಸಿ ಸಂಜೆ ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಪಿ ದೇವರಾಜ್, ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ಹಲ್ಲೆಗೊಳಗಾದ ಆರ್‌ಎಸ್‌ಎಸ್ ಕಾರ್ಯಕರ್ತ ರವಿಕುಮಾರ್, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರಧರ, ಸಬ್‌ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net