ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಚೂರಿ ಇರಿತ, ಆರೋಪಿ ಬಂಧನ

nowfal
Published on

ಕಡಬ: ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಮೀನು ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಚುಚ್ಚಿದ ಘಟನೆ ಕಡಬ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ನೌಫಾಲ್ ಹಾಗೂ ನವಾಜ್ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ನೌಫಾಲ್ ನವಾಜ್‌ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದು ಪರಿಣಾಮ ನವಾಜ್‌ಗೆ ತೀವ್ರ ಗಾಯವಾಗಿದ್ದು, ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸದ್ಯ ಈ ಕುರಿತು ನವಾಜ್ ನೌಫಾಲ್ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 504,323,326,506 ಅಡಿಯಲ್ಲಿ ಎಫ್‌ಐಆಆರ್ ದಾಖಲಾಗಿದೆ. ಸದ್ಯ ಆರೋಪಿ ನೌಫಲ್ನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net