ಎಸ್ಟಿ ಪಟ್ಟಿಗೆ ಸೇರಿಸಲು ವಿಜಯೇಂದ್ರಗೆ ಉಪ್ಪಾರ ಸಮಾಜ ಮನವಿ

ST Reservation, Hiriyur, Upara society, BY Vijayendra, Memorandum,
Published on

ಹಿರಿಯೂರು: ಉಪ್ಪಾರ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಹಾಗೂ ಗಿರೀಶ್ ಉಪ್ಪಾರ ಅವರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ತಾಲೂಕಿನ ಉಪ್ಪಾರ ಸಮಾಜದ ಮುಖಂಡರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿದರು.

ಶಿರಾಕ್ಕೆ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಟ್ಟರು. ತಾಲೂಕು ಬಿಜೆಪಿ ಒಬಿಸಿ ಘಟಕದ ಅಧ್ಯಕ್ಷ ಆಲೂರು ಕನಕದಾಸ ಮಾತನಾಡಿ, ಉಪ್ಪಾರ ಸಮುದಾಯವು ಅತ್ಯಂತ ಹಿಂದುಳಿದಿದೆ. ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದು ಸಮಾಜವನ್ನು ಎಸ್ಟಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.

ಸಮಾಜದ ಮುಖಂಡರಾದ ದುಗ್ಗಾವರ ರಂಗಸ್ವಾಮಿ, ವೀರೇಶ್, ನಾಗೇಂದ್ರ, ವೆಂಕಟೇಶ್, ಬಸವರಾಜ್, ಮಂಜುನಾಥ್, ಕರಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net