ಎಸ್ಟಿ ಮೀಸಲು ರಾಜ್ಯಾದ್ಯಂತ ವಿಸ್ತರಿಸಿ

ST RESERVATION APPLY STATE WIDE MEMORANDUM MP
ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲು ಕಲ್ಪಿಸುವ ವರದಿ ಕೇಂದ್ರ ಸರ್ಕಾರ ಅಂಗೀಕರಿಸಲು ಒತ್ತಾಯಿಸುವಂತೆ ಹಾಲುಮತ ಮಹಾಸಭಾ ಜಿಲ್ಲಾ ಪದಾಧಿಕಾರಿಗಳು ಗುರುವಾರ ಸಂಸದ ಸಂಗಣ್ಣ ಕರಡಿಗೆ ಕೊಪ್ಪಳದಲ್ಲಿ ಮನವಿ ಸಲ್ಲಿಸಿದರು. ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ್, ಜಿಲ್ಲಾಧ್ಯಕ್ಷ ಹನುಮಂತ ಕೌದಿ, ಜಿಲ್ಲಾ ಕಾರ್ಯಧ್ಯಕ್ಷ ಗ್ಯಾನಪ್ಪ ತಳಕಲ್ ಇದ್ದರು.
Published on

ಕೊಪ್ಪಳ: ಪರಿಶಿಷ್ಟ ಪಂಗಡದಲ್ಲಿರುವ ಕುರುಬ ಸಮುದಾಯವನ್ನು ಕೇವಲ ಕೊಡಗು ಜಿಲ್ಲೆಗೆ ಸೀಮಿತಗೊಳಿಸಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ ಇರುವ ಕುರುಬರಿಗೂ ಮೀಸಲಾತಿ ವಿಸ್ತರಿಸಲು ಕೇಂದ್ರಕ್ಕೆ ಮನವಿ ಮಾಡುವಂತೆ ಒತ್ತಾಯಿಸಿ

ಜಿಲ್ಲಾ ಹಾಲುಮತ ಮಹಾಸಭಾ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಂಸದ ಸಂಗಣ್ಣ ಕರಡಿಗೆ ಮನವಿ ಸಲ್ಲಿಸಿದರು.

ನಾವು ಮೂಲತಃ ಬುಡಕಟ್ಟು ಸಮುದಾಯದವರು. ಈಗಲೂ ಬುಡಕಟ್ಟು ಆಚರಣೆ, ಸಂಸ್ಕೃತಿ ಅನುಸರಿಸುತ್ತಿದ್ದೇವೆ.

ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಕ್ರಮ ಸಂಖ್ಯೆ 28ರಲ್ಲಿ ಕುರುಬ ಜಾತಿ ಉಲ್ಲೇಖವಿದ್ದು, ಕೇವಲ ಕೊಡುಗು ಜಿಲ್ಲೆಗೆ ಅನ್ವಯಿಸಲಾಗುತ್ತಿದೆ.

ಇದೇ ಸಮುದಾಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೊಂಡ, ಜೇನು ಕುರುಬ, ಕಾಡು ಕುರುಬ, ಕಾಟನಾಯಕನ್, ಬೆಟ್ಟ ಕುರುಬ ಹೆಸರಿನಿಂದ ಕರೆಯಲ್ಪಡುತ್ತದೆ.

ಹೀಗಾಗಿ ದಶಕದಿಂದಲೂ ಮೀಸಲಾತಿ ಸಿಗದೆ ಪರದಾಡುತ್ತಿದ್ದೇವೆ ಎಂದರು.

ಕಳೆದ ಬಿಜೆಪಿ ಸರ್ಕಾರ 25 ಜಿಲ್ಲೆಗಳಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ನಡೆಸಿದೆ. ಇತ್ತೀಚೆಗೆ ವರದಿ ಕೇಂದ್ರಕ್ಕೆ ಶಿಫಾರಸ್ಸುಗೊಂಡಿದೆ. ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಬೇಕಿದೆ.

ಲೋಕಸಭೆ, ರಾಜ್ಯಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆಯಬೇಕಿದೆ.

ವರದಿ ಸಂಬಂಧ ಕೇಂದ್ರ ಬುಡಕಟ್ಟು ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಮನವರಿಕೆ ಮಾಡಿ ಸಮುದಾಯಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ದ್ಯಾಮಣ್ಣ ಕರಿಗಾರ್, ಜಿಲ್ಲಾಧ್ಯಕ್ಷ ಹನುಮಂತ ಕೌದಿ, ಜಿಲ್ಲಾ ಕಾರ್ಯಧ್ಯಕ್ಷ ಗ್ಯಾನಪ್ಪ ತಳಕಲ್, ಜಿಲ್ಲಾ ಉಪಾಧ್ಯಕ್ಷರಾದ ಕುಬೇರ ಮಜ್ಜಿಗೆ, ಹನುಮಂತಪ್ಪ ಹನುಮಾಪುರ,

ತಾಲೂಕಾಧ್ಯಕ್ಷ ಮುದ್ದಪ್ಪ ಗೊಂದಿಹೊಸಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ ಬಂಗಾಳಿ, ಬಸವರಾಜ ಗುರಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net