ಸಂತ ಫಿಲೋಮಿನಾ ಪ್ರೌಢಶಾಲೆ ವಾರ್ಷಿಕ ದಿನಾಚರಣೆ

Published on

ಮೈಸೂರು: ಸಂತ ಫಿಲೋಮಿನಾ ಪ್ರೌಢಶಾಲೆಯ ವಾರ್ಷಿಕ ದಿನಾಚರಣೆ ಡಿ.21ರಂದು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಸಗಾಯ್‌ರಾಜ್ ತಿಳಿಸಿದರು.

ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಅಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವರೆಂಡ್ ಫಾದರ್ ಡಾ.ಬರ್ನಾರ್ಡ್ ಮೊರಾಸ್ ವಹಿಸಲಿದ್ದಾರೆ. ಶಾಸಕ ತನ್ವೀರ್‌ಸೇಠ್, ಸಂಸ್ಥೆ ಸಂಯೋಜಕರಾದ ರೆವರೆಂಡ್ ಫಾದರ್ ಸ್ಟಾೃನಿ ಡಿ ಅಲ್ಮೆಡಾ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಉಪ ಮೇಯರ್ ಎ.ಜೆ.ಅರ್ಜುನ್‌ಕುಮಾರ್, ಬಿಜೆಪಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಡಾ.ಅನಿಲ್ ಥಾಮಸ್ ಇತರರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1942ರಲ್ಲಿ ಆರಂಭವಾದ ಪ್ರೌಢಶಾಲೆ ಇದುವರೆಗೆ ಸಾವಿರಾರು ವಿದ್ಯಾರ್ಥಿಗಳು ಕಲಿತಿದ್ದಾರೆ. ಇವರಲ್ಲಿ ಅನೇಕರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈಗಲೂ ಶಾಲೆ ಜತೆಗೆ ಉತ್ತಮ ಸಂಬಂಧ ಹೊಂದಿದ್ದು, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಇದೇ ರೀತಿ ಈ ಬಾರಿಯ ವಾರ್ಷಿಕೋತ್ಸವ ನೆರವಿನಿಂದ ಅದ್ಧೂರಿಯಾಗಿ ನಡೆಯುತ್ತಿದೆ ಎಂದರು.

ಹಳೇ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ವಿಶ್ವರಾಜ್, ಇ.ಟಿ.ಇಮ್ಯಾನ್ಯುಯಲ್, ಡಾ.ಸಲೀಂ ಅಹಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net