

ಕಡಬ: ಕುಂತೂರುಪದವು ಸಂತ ಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಂಆರ್‌ಪಿಎಲ್‌ನ ಸಿಎಸ್‌ಆರ್ ಫಂಡ್‌ನ 15 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಬಾಲಕ ಹಾಗೂ ಬಾಲಕಿಯರ ಶೌಚಗೃಹ ಉದ್ಘಾಟನೆಗೊಂಡಿತು.
ಎಂಆರ್‌ಪಿಎಲ್‌ನ ಸಿಎಸ್‌ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರದೀಪ್‌ಕುಮಾರ್ ನಾಮಫಲಕ ಅನಾವರಣಗೊಳಿಸಿದರು. ಪೆರಾಬೆ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ಕೆ., ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಕೋಚಕಟ್ಟೆ, ಶಾಲಾ ಸಂಚಾಲಕ ಕೆ.ಎಸ್.ತೋಮಸ್, ಕಾರ್ಯದರ್ಶಿ ಮೋನ್ಸಿ ಫ್ರಾನ್ಸಿಸ್, ಖಜಾಂಚಿ ಶಾಜಿ ಕೆ.ಜಾನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ರೈ ಕೇವಳ, ಇಂಜಿನಿಯರ್ ತೌಸೀಫ್ ಮೊದಲಾದವರಿದ್ದರು.
ಅನುದಾನ ಒದಗಿಸಿಕೊಟ್ಟ ಎಂಆರ್‌ಪಿಎಲ್‌ನ ಸಿಎಸ್‌ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಹಾಗೂ ಇಂಜಿನಿಯರ್ ತೌಸಿಫ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ. ಸ್ವಾಗತಿಸಿದರು. ಶಿಕ್ಷಕಿ ತ್ರೇಸಿಯಮ್ಮ ನಿರೂಪಿಸಿದರು. ಶಿಕ್ಷಕಿ ಭುವನೇಶ್ವರಿ ವಂದಿಸಿದರು.