ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ಘಟಿಕೋತ್ಸವ

mng-14june-aloysius
Published on



ಮಂಗಳೂರು : ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ 15ನೇ ಘಟಿಕೋತ್ಸವ ಶನಿವಾರ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಸುರತ್ಕಲ್‌ನ ಎನ್‌ಐಟಿಕೆಯ ನಿರ್ದೇಶಕ ಪ್ರೊ.ಬಿ.ರವಿ ಮಾತನಾಡಿ ಇಂದಿನ ಯುವ ಪೀಳಿಗೆ ಶಿಕ್ಷಣದಿಂದ ದೊರೆತ ಜ್ಞಾನ, ತರಗತಿಯ ಹೊರಗಿನಿಂದ ಪಡೆದ ಅನುಭವದಿಂದ ತಮ್ಮ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಸ್ವಾಭಾವಿಕ ಬುದ್ದಿಮತ್ತೆಯು ನಮ್ಮ ಎಲ್ಲ ಸಮಸ್ಯೆಗಳನ್ನು ಸರಿದೂಗಿಸಲು ಪ್ರಯೋಜನವಾಗುತ್ತದೆ. ವ್ಯಕ್ತಿಯೊಬ್ಬ ನೈತಿಕತೆಯ ಮೌಲ್ಯ ಅಳವಡಿಸಿದಾಗ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಗೌರವ ಅತಿಥಿಯಾಗಿದ್ದ ಮಂಗಳೂರು ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಪದವಿ ಪಡೆದ
ಬಳಿಕ ಯಾವುದೇ ಕ್ಷೇತ್ರದಲ್ಲಿ ಬೆಳೆಯುವಾಗ ಶಿಸ್ತು, ಸ್ವ ಸಮರ್ಪಣೆ ಗತ್ಯ. ಜತೆಗೆ ಪರಿಸರ ಸುಸ್ಥಿರತೆಯನ್ನು ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಪ್ರಮಾಣ ವಚನ ಬೋಧಿಸಿದರು.
ಮಂಗಳೂರು ಜೆಸ್ವಿಟ್ ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷ ಫಾ. ಡಯೋನಿಶಿಯಸ್ ವಾಝ್ ಶುಭ ಹಾರೈಸಿದರು.
ಹಿಂದಿನ ವರ್ಷ ಮೆದುಳು ನಿಷ್ಕ್ರಿಯಗೊಂಡು ಅಂಗಾಗ ದಾನ ಮಾಡಿದ ಕಾಲೇಜಿನ ವಿದ್ಯಾರ್ಥಿನಿ ಗ್ಲೋರಿಯಾ ರಾಡ್ರಿಗಸ್ ಅವರ ಇವರ ತಾಯಿ ಘಟಿಕೋತ್ಸವದ ಪ್ರಮಾಣ ಪತ್ರ ಸ್ವೀಕರಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 94 ರ‌್ಯಾಂಕ್ ಹಾಗೂ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು. ಸ್ನಾತಕ ಪದವಿ,
ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೊಮಾದ ಒಟ್ಟು 2567 ವಿದ್ಯಾರ್ಥಿಗಳು ಘಟಿಕೋತ್ಸವ
ಪ್ರಮಾಣ ಪತ್ರ ಸ್ವೀಕರಿಸಿದರು.
ಕುಲಸಚಿವ ಡಾ. ಆಲ್ವಿನ್ ಡೆಸಾ ಅವರು ರ‌್ಯಾಂಕ್ ವಿದ್ಯಾರ್ಥಿಗಳ ಹಾಗೂ ವಿಶೇಷ ಬಹುಮಾನ ವಿಜೇತ ವಿದ್ಯಾರ್ಥಿಗಳ ವಿವರ ವಾಚಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಸ್ವಾಗತಿಸಿ, ಘಟಿಕೋತ್ಸವದ ಸಂಯೋಜಕಿ ಎ.ವನಜಾ ವಂದಿಸಿದರು. ಉಪನ್ಯಾಸಕರಾದ ಮನೋಜ್ ಫೆರ್ನಾಂಡಿಸ್ ಮತ್ತು ಡಾ.ಮೋನಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net