ಮಳೆಹಾನಿ ಸಂತ್ರಸ್ತರಿಗೆ ಟಾರ್ಪಲ್, ಪಡಿತರ ವಿತರಣೆ

8ss1parikara vitarane
Published on

ಶನಿವಾರಸಂತೆ : ಬೆಂಗಳೂರಿನ ಆಶಾ ಕಿರಣ ಕಲಾ ಟ್ರಸ್ಟ್ಟ್ ವತಿಯಿಂದ ಸೋಮವಾರಪೇಟೆ ತಾಲೂಕಿನ ಮಳೆ ಹಾನಿ ಸಂತ್ರಸ್ತರಿಗೆ ಟಾರ್ಪಲ್ ಮತ್ತು ಪಡಿತರ ವಿತರಿಸಲಾಯಿತು. ಸೋಮವಾರಪೇಟೆ ತಾಲೂಕಿನಲ್ಲಿ ಮಳೆಗೆ ಬಡವರ ಮನೆಗಳಿಗೆ ಹಾನಿಯಾಗಿದೆ. ಅವರೆಲ್ಲರೂ ಸಂಕಷ್ಟದಲ್ಲಿ ಇರುವ ಕಾರಣ ಆಶಾ ಕಿರಣ ಕಲಾ ಟ್ರಸ್ಟ್ ಅಧ್ಯಕ್ಷೆ ಹಾಗೂ ಕಿರುತೆರೆ ಕಲಾವಿದೆ ಮಾಲತಿ ಅವರು ನೀಡಿದ್ದ ಟಾರ್ಪಲ್ ಹಾಗೂ ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಲಾಯಿತು.
ಸೋಮವಾರಪೇಟೆ ತಾಲೂಕು ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮತ್ತು ತಂಡದವರು ರಾಮನಳ್ಳಿ, ಎಳನೀರುಗುಂಡಿ, ನಂದಿಗುಂದ, ಚನ್ನಾಪುರ, ಹಿರಿಕರ ಗ್ರಾಮಗಳ 27 ಮನೆಗಳಿಗೆ ಖುದ್ದಾಗಿ ತೆರಳಿ ನೊಂದವರ ಕ್ಷೇಮ ವಿಚಾರಿಸಿ ಸವಲತ್ತು ವಿತರಿಸಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net