ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ

5ss1premkumar udghatane
Published on

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಘಟಕದಿಂದ ಯಾಂತ್ರೀಕೃತ ಭತ್ತ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಸೋಮವಾರ ನೀರುಗುಂದ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಗ್ರಾಮದ ಪ್ರಗತಿಪರ ರೈತ ಪ್ರೇಮ್‌ಕುಮಾರ್, ಭತ್ತ ಬೇಸಾಯವನ್ನು ಕ್ರಮವಾಗಿ ಅನುಸರಿಸಿದರೆ ಅಧಿಕ ಲಾಭ ಗಳಿಸಬಹುದು ಎಂದರು. ಯಾಂತ್ರೀಕೃತ ಭತ್ತ ಬೇಸಾಯದ ಕ್ರಮವನ್ನು ತರಬೇತಿ ಮೂಲಕ ತಿಳಿಯುವುದರಿಂದ ನಮ್ಮ ರಂಗದಲ್ಲಿ ಹೊಸತನ ಸಾಧಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net