

ಎಸ್ ಎಸ್ ಎಲ್ ಸಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ
ಕಲಬುರಗಿ: 2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚಿನ ಅಂಕಗಳನ್ನ ಪಡೆದು ಪ್ರಥಮ ಸ್ಥಾನ ಪಡೆದ 10 ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿ ಅಭಿನಂದಿಸಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ 10 ವಿಧ್ಯಾರ್ಥಿಗಳು, ಅಂಕಿತ-ಶರಣಬಸವೇಶ್ವರ ಫ್ರೌಢಶಾಲೆ ಕಲಬುರಗಿ, 621 ಅಂಕಗಳು, ಪೂರ್ವಾಶಾ ಮಾಲಿಪಾಟೀಲ ಶರಣಬಸವೇಶ್ವರ ಫ್ರೌಢಶಾಲೆ ಕಲಬುರಗಿ 621 ಅಂಕಗಳು, ರಾಗಿಣಿ ವೀರೇಂದ್ರ ಪಾಟೀಲ್ ಪಬ್ಲಿಕ್ ಸ್ಕೂಲ್ (ಕನ್ನಡ ಮಾಧ್ಯಮ) ಚಿಂಚೋಳಿ ತಾಲೂಕು ಕಲಬುರಗಿ 621 ಅಂಕಗಳು, ಸೌಮ್ಯ ಮೌಂಟ್ ವೇವ್ ಇಂಗ್ಲೀಷ ಮೀಡಿಯಂ ಹೈಸ್ಕೂಲ್ ಮಹಾಗಾಂವ್ ಕ್ರಾಸ್ ಕಲಬುರಗಿ 621 ಅಂಕಗಳು, ಮಹಾಲಕ್ಷ್ಮೀ ಶ್ರೀ ಬಸವ ಗುರುಕುಲ ಫ್ರೌಢಶಾಲೆ ಕಲಬುರಗಿ 621 ಅಂಕಗಳು, ತನುಶ್ರೀ ಶರಣಬಸವೇಶ್ವರ ಫ್ರೌಢಶಾಲೆ ಕಲಬುರಗಿ 620 ಅಂಕಗಳು, ಪೂರ್ವಿ ಎಂ.ಎಸ್ ಸೇಂಟ್ ಮೇರಿಸ್ ಇಂಗ್ಲೀಷ ಮೀಡಿಯಂ ಸ್ಕೂಲ್ ಕಲಬುರಗಿ 620 ಅಂಕಗಳು, ಜಿ.ವಿ ದಯಾನಿಧಿ ಎಸ್ ಆರ್ ಎನ್ ಮೆಹ್ತಾ ಇಂಗ್ಲೀಷ ಮೀಡಿಯಂ ಸ್ಕೂಲ್ ಕಲಬುರಗಿ 619 ಅಂಕಗಳು, ಅಕ್ಷತಾ ಮುರಾರ್ಜಿ ದೇಸಾಯಿ ವಸತಿ ಶಾಲೆ ಹೆಬ್ಬಳ ಚಿತ್ತಾಪೂರ ತಾಲೂಕು 619 ಅಂಕಗಳು, ಭಾವಾನಾ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಲಗನೂರು ಕಲಬುರಗಿ ದಕ್ಷಿಣ 619 ಅಂಕಗಳು, ಪಡೆದುಕೊಂಡು ವಿಧ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ್ ಮದಾನೆ ಹಾಗೂ ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಉಪ ಸ್ಥಿತರಿದ್ದರು