

ಬೆಳಗಾವಿ : ಜಿಲ್ಲಾದ್ಯಂತ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಜೂ.12ರಿಂದ 19ರವರೆಗೆ ಜಿಲ್ಲೆಯ ವಿವಿಧ 15 ಪರೀಕ್ಷಾ ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಒಟ್ಟು 4470 ವಿದ್ಯಾರ್ಥಿಗಲು ಪರೀಕ್ಷೆ ಬರೆಯಲಿದ್ದಾರೆ.
ಜೂ.12ರಂದು ಸೋಮವಾರ ಮೊದಲ ದಿನ ಬೆಳಗ್ಗೆ 10.30ರಿಂದ 1.45ರವರೆಗೆ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದ್ದು, ಜೂ.13ರಂದು ವಿಜ್ಞಾನ, 14ರಂದು ಬುಧವಾರ ದ್ವಿತೀಯ ಭಾಷೆ, 15ರಂದು ಗುರುವಾರ ಸಮಾಜ-ವಿಜ್ಞಾನ, 16ರಂದು ತೃತೀಯ ಭಾಷೆ, 17ರಂದು ಶನಿವಾರ ಗಣಿತ, ಸಮಾಜಶಾಸ್ತ್ರ ಹಾಗೂ 19ರಂದು ಸೋಮವಾರ ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಖಾನಾಪುರ ತಾಲೂಕಿನಲ್ಲಿ ತಾರಾರಾಣಿ ಪ್ರೌಢಶಾಲೆ ಹಾಗೂ ಸರ್ವೋದಯ ವಿದ್ಯಾಲಯದಲ್ಲಿ ತಾಲೂಕಿನ 354 ವಿದ್ಯಾರ್ಥಿಗಳು, ರಾಮದುರ್ಗ ತಾಲೂಕಿನ ಬಿ.ವಿ.ಬಿಯ ನೂತನ ಬಾಲಕಿಯರ ಪ್ರೌಢ ಶಾಲೆಯಲ್ಲಿ 239, ಬೈಲಹೊಂಗಲದ ಎಂಎಸ್‌ಎಸ್‌ಆರ್ ಪ್ರೌಢಶಾಲೆ ಹಾಗೂ ಎಂಕೆಸಿಆರ್ ಪ್ರೌಢಶಾಲೆಯಲ್ಲಿ ಒಟ್ಟು 421, ಕಿತ್ತೂರಿನ ರಾಣಿ ಚನ್ನಮ್ಮ ರೋಟರಿ ಪ್ರೌಢಶಾಲೆಯಲ್ಲಿ 275, ಸವದತ್ತಿಯ ಎಸ್.ಕೆ.ಪದವಿ ಪೂರ್ವ ಕಾಲೇಜಿನಲ್ಲಿ 494, ಬೆಳಗಾವಿ ನಗರದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮಹಾಂತೇಶ ನಗರದ ಕನ್ನಡ ಮಾದ್ಯಮ ಪ್ರೌಢ ಶಾಲೆ, ಬೆನನ್ ಸ್ಮೀಥ ಪ್ರೌಢ ಶಾಲೆ, ವನಿತಾ ವಿದ್ಯಾಲಯ ಕನ್ನಡ/ಮರಾಠಿ ಮಾದ್ಯಮ ಪ್ರೌಢ ಶಾಲೆ, ಕ್ಯಾಂಪ್‌ನ ಇಸ್ಲಾಮಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಜಿ.ಎ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 1883 ಹಾಗೂ ಬೆಳಗಾವಿ ಗ್ರಾಮೀಣ ವಲಯದ ಚವ್ವಾಟಗಲ್ಲಿಯ ಮರಾಠಾ ಮಂಡಳ ಪ್ರೌಢ ಶಾಲೆ ಹಾಗೂ ಕಿಲ್ಲಾ ಹತ್ತಿರ ಡಿವೈಸಿ ಭರತೇಶ ಪ್ರೌಢ ಶಾಲೆಯಲ್ಲಿ 804 ಸೇರಿದಂತೆ ಜಿಲ್ಲಾದ್ಯಂತ ಒಟ್ಟು 4470 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.