ಸೋಲೇ ಗೆಲುವಿನ ಮೆಟ್ಟಿಲು, ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ ರಾಜ್​ ಸಲಹೆ

sslc students workshop in koppal incharge secretory K P Mohanraj
ಸಂವಾದದಲ್ಲಿ ಭಾಗಿಯಾಗಿದ್ದ ಶಿಕ್ಷಕರು, ವಿದ್ಯಾರ್ಥಿಗಳು.
Published on

ಕೊಪ್ಪಳ: ಜೀವನದಲ್ಲಿ ಏರುಪೇರು ಸಹಜ. ಸೋಲುಗಳನ್ನು ಸವಾಲುಗಳಾಗಿ ಸ್ವೀಕರಿಸಿದಾಗಲೇ ಗೆಲ್ಲಲು ಸಾಧ್ಯ. ಜೀವನದಲ್ಲಿ ಎಸ್ಸೆಸ್ಸೆಲ್ಸಿ ಹಂತ ಪ್ರಮುಖ ಟ್ಟ. ಪರೀೆ ಪಾಸಾಗಲು ಇರುವ ತೊಡುಗಳ ಬಗ್ಗೆ ಮನಬಿಚ್ಚಿ ಮಾತನಾಡಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್​ ಹೇಳಿದರು.

ಎಸ್ಸೆಸ್ಸೆಲ್ಸಿ ಲಿತಾಂಶ ಕುಸಿತ ಹಿನ್ನೆಲೆಯಲ್ಲಿ ನಗರದ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಪಾಸ್​/ೇಲ್​ ಆದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವನು. ನಮ್ಮ ತಂದೆ ಎಸ್ಸೆಸ್ಸೆಲ್ಸಿ ೇಲ್​ ಆದವರು. ನಾನೂ ಸಾಧಾರಣ ವಿದ್ಯಾರ್ಥಿ ಆಗಿದ್ದೆ. ಆರಂಭದಲ್ಲಿ ಎಲ್​ಐಸಿಯಲ್ಲಿ ಕೆಲಸಕ್ಕೆ ಸೇರಿದ್ದೆ. ನಂತರ ದೃಢ ಸಂಕಲ್ಪ ಮಾಡಿ ಐಎಎಸ್​ ತೇರ್ಗಡೆಯಾದೆ. ನಮ್ಮೂರಿನಲ್ಲಿ ಎಲ್ಲರೂ ಶ್ರೀಮಂತರೆ. ದೊಡ್ಡ ಉದ್ದಿಮೆ ಹೊಂದಿದ್ದಾರೆ. ನಮ್ಮೂರಿನಲ್ಲಿ ಐಎಎಸ್​ ಪಾಸ್​ ಮಾಡಿದ ಮೊದಲಿಗ ನಾನೇ. ಶಾಲೆಗೆ ನನ್ನನ್ನು ಅತಿಥಿಯಾಗಿ ಕರೆಸಿ ಗೌರವಿಸಿದರು. ಆರಂಭದಲ್ಲಿ ಎಲ್ಲರಿಗೂ ಗೊಂದಲ ಇರುತ್ತದೆ. ಮದುವೆ ಸೇರಿ ಯಾವುದೇ ಕಾರಣ ಸಾಧನೆಗೆ ಅಡ್ಡಿಯಲ್ಲ. ಅನೇಕರು ಮದುವೆ ನಂತರವೂ ಐಎಎಸ್​, ಐಪಿಎಸ್​ ಅಧಿಕಾರಿಗಳಾಗಿದ್ದಾರೆ ಎಂದು ತಮ್ಮ ಜೀವನದ ಉದಾಹರಣೆಯನ್ನೇ ಮಕ್ಕಳಿಗೆ ನೀಡಿದರು.

ಕಳೆದ ವರ್ಷ ಕೊಪ್ಪಳದಲ್ಲಿ ಶೇ.91ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. ಈ ವರ್ಷ ಶೇ.63ರಷ್ಟು ಪಾಸಾಗಿದ್ದಾರೆ. ಲಿತಾಂಶ ಕುಸಿಯಲು ಕಾರಣ ಹುಡುಕಬೇಕಿದೆ. ಅದಕ್ಕಾಗಿ ನಿಮ್ಮೊಂದಿಗೆ ಸಂವಾದ ಏರ್ಪಡಿಸಿದ್ದೇವೆ. ಮುಕ್ತವಾಗಿ ಮಾತನಾಡಿ ಎಂದು ಮನವಿ ಮಾಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಕೆಕೆಆರ್​ಡಿಬಿ ಅನುದಾನದಿಂದ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಅಧಿಕಾರಿಗಳು ಎಲ್ಲ ಶಾಲೆಗಳಿಂದ ಕ್ರಿಯಾಯೋಜನೆ ರಚಿಸಿ ಕಳಿಸಿ. ಶಿಕ್ಷಕರೊಂದಿಗೆ ಸಭೆ ನಡೆಸಿ ಲಿತಾಂಶ ಕುಸಿತಕ್ಕೆ ಕಾರಣ ಪಟ್ಟಿ ಮಾಡಿದ್ದೇವೆ. ಈ ಬಗ್ಗೆ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದಲ್ಲಿ ಮೂಲ ಕಾರಣ ಪತ್ತೆಗೆ ಸಹಕಾರಿಯಾಗಲಿದೆ ಎಂದು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ವಿದ್ಯಾರ್ಥಿಗಳಾದ ವೀಣಾ, ಲಾವಣ್ಯ, ಮಾಳಪ್ಪ, ನಯನಾ, ಕವಿತಾ, ಪಾರ್ವತಿ, ಆನಂದ, ಐಶ್ವರ್ಯ, ವಿಕಾಸ, ಸುಹಾನ, ಚಂದನ, ವಿಜಯಕುಮಾರ ಸಂವಾದದಲ್ಲಿ ಭಾಗಿಯಾಗಿ ಪ್ರಶ್ನೆ ಕೇಳಿದರು. ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸಂವಿಧಾನ, ಕಥೆ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಬಂದ ಉತ್ತರಗಳನ್ನು ಆಧರಿಸಿ ಪರಿಹಾರವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒಗಳು, ಶಿಕ್ಷಕರು ಇದ್ದರು.

ಮಕ್ಕಳು ನೀಡಿದ ಕಾರಣಗಳಿವು
ಓದಿದ್ದು ನೆನಪಿರುವುದಿಲ್ಲ, ಕರೊನಾದಲ್ಲಿ ಆನ್​ಲೈನ್​ ಪಾಠ ಸರಿಯಾಗಿಲ್ಲ, 8&9ನೇ ತರಗತಿಯಲ್ಲಿ ಸುಮ್ಮನೇ ಪಾಸ್​ ಮಾಡಿದ್ದಾರೆ,
ವೆಬ್​ ಕಾಸ್ಟಿಂಗ್​ ಬಗ್ಗೆ ಅತಿಯಾಗಿ ಹೇಳಿ ಹೆದರಿಸಿದರು, ಮೂರು ವಾರ್ಷಿಕ ಪರೀೆ ಇಟ್ಟಿದ್ದರಿಂದ ಬೇಜವಾಬ್ದಾರಿತನ ಬಂದಿದೆ, ಮುಖ್ಯ ಪ್ರಶ್ನೆ, ಪ್ರಮುಖ ಪಠ್ಯಗಳಿಗೆ ಆದ್ಯತೆ ನೀಡಿ ತರಬೇತಿ ನೀಡುವುದಿಲ್ಲ, ಬಡತನ ಕಾರಣ 8ನೇ ತರಗತಿವರೆಗೆ ಸರಿಯಾಗಿ ಶಾಲೆಗೆ ಹೋಗದಿದ್ದರೂ ಪಾಸ್​ ಮಾಡುತ್ತಾರೆ ಎಂದು ಕೆಲ ವಿದ್ಯಾಥಿಗಳು ಹೇಳಿದರು. ರಜಾ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ ಆಗಲಿ. 8,9ನೇ ತರಗತಿಯಲ್ಲೂ ವೆಬ್​ಕಾಸ್ಟಿಂಗ್​ ಅಡಿ ಪರೀೆ ನಡೆಸಿ. ದಸರಾ ರಜೆ ಅವಧಿ ಕಡಿತ ಮಾಡಿ. ಖಾಸಗಿಯಲ್ಲಿ 9ನೆ ತರಗತಿ ೇಲ್​ ಆದವರು ಸರ್ಕಾರಿ ಶಾಲೆ ಸೇರುತ್ತಾರೆ. ಸರ್ಕಾರಿ ಶಾಲೆಯಲ್ಲಿ ನಿಗದಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲೆಯಲ್ಲಿ ಬೇಕೆಂದೇ ೇಲ್​ ಮಾಡುತ್ತಾರೆ ಎಂಬ ವದಂತಿ ಇದೆ ಎಂದು ಹಲವರು ತಮ್ಮ ಸಮಸ್ಯೆ ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net