ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಅನನ್ಯ ಭಟ್

SSLC Manvi Ananya 5th Rank
ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಮಾನ್ವಿಯ ಅನನ್ಯಗೆ ತಾಯಿ ಪೂರ್ಣಿಮಾ ಸಿಹಿ ತಿನಿಸಿ ಹರ್ಷ ವ್ಯಕ್ತಪಡಿಸಿದರು.
Published on

ಮಾನ್ವಿ: ಪಟ್ಟಣದ ಕಾಕತೀಯ ಶಾಲೆಯ ವಿದ್ಯಾರ್ಥಿನಿ ಅನನ್ಯ ಭಟ್ 625ಕ್ಕೆ 621 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾಳೆ. ಕನ್ನಡ 125, ಇಂಗ್ಲಿಷ್ 99, ಹಿಂದಿ 100, ಗಣಿತ 99, ವಿಜ್ಞಾನ 98, ಸಾಮಾನ್ಯ ವಿಜ್ಞಾನ 100 ಅಂಕ ಗಳಿಸಿದ್ದಾಳೆ.

ಮಗಳ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿರುವ ಅನನ್ಯ ತಂದೆ ಜಗನ್ನಾಥ ಭಟ್, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದು ಪ್ರತಿದಿನ ಶ್ರಮಪಟ್ಟು ಅಭ್ಯಾಸ ಮಾಡಿದ್ದರಿಂದ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾಳೆ ಎಂದರು.

ವಿದ್ಯಾರ್ಥಿನಿ ಅನನ್ಯ ಭಟ್ ಮಾತನಾಡಿ, ರಾಜ್ಯಕ್ಕೆ ಮೊದಲು ಅಥವಾ 2ನೇ ಸ್ಥಾನ ಪಡೆಯಬೇಕೆಂದು ತೀರ್ಮಾನ ಮಾಡಿ ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದ್ದೆ. ಐದನೇ ಸ್ಥಾನ ಬಂದಿರುವುದಕ್ಕೆ ಖುಷಿ ಇದೆ. ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು ವೈದ್ಯೆ ಅಥವಾ ಇಂಜನಿಯರ್ ಆಗುವ ಆಸೆ ಇದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net