ಶಿಕ್ಷಕರಿಗೆ ಬಯೋಮೆಟ್ರಿಕ್​ ಮೂಗುದಾರ

sslc results koppal bio metric attendance education department
ಶಿಕ್ಷಣ ಇಲಾಖೆ ಕಚೇರಿ ಹೊರನೋಟ
Published on
  • ಚಕ್ಕರ್​ ತಪ್ಪಿಸಲು ಕ್ರಮ
  • ಫಲಿತಾಂಶ ಸುಧಾರಣಾ ಭಾಗವಾಗಿ ಕ್ರಮ

ವಿಜಯವಾಣಿ ವಿಶೇಷ ಕೊಪ್ಪಳ
ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದೆ. ಈ ಬೆನ್ನಲ್ಲೇ ಸೂಕ್ತ ಕಾರಣ ಹಾಗೂ ಪರಿಹಾರ ಮಾರ್ಗ ಹುಡುಕಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್​ ವಾರ್ನಿಂಗ್​ ಮಾಡಿದ್ದಾರೆ. ಫಲಿತಾಂಶ ಕುಸಿತಕ್ಕೆ ಕೆಲವೆಡೆ ಶಿಕ್ಷಕರ ಗೈರು ಒಂದು ಕಾರಣವೆಂದರಿತ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬಯೋಮೆಟ್ರಿಕ್​ ಹಾಜರಾತಿ ಅಳವಡಿಕೆಗೆ ಮುಂದಾಗಿದ್ದಾರೆ.

ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.61.16ರಷ್ಟಾಗಿದೆ. ಹಿಂದಿನ ವರ್ಷದಲ್ಲಿ ಶೇ.90.27ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದರು. ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆ 17 ಸ್ಥಾನ ಕುಸಿತ ಕಂಡಿದೆ. ಶೇ.30ರಷ್ಟು ಲಿತಾಂಶ ಕಡಿಮೆಯಾಗಿದೆ. ರಾಜ್ಯದ ಸರಾಸರಿಯಷ್ಟು ಫಲಿತಾಂಶ ಪಡೆಯುವಲ್ಲಿ ಜಿಲ್ಲೆ ವಿಲವಾಗಿದೆ. ವೆಬ್​ ಕಾಸ್ಟಿಂಗ್​ ಅಳವಡಿಕೆ ನೆಪ ಹೇಳಿದರೂ ಸಾಕಷ್ಟು ಕಾರಣಗಳಿಂದ ಫಲಿತಾಂಶ ಕಳಪೆಯಾಗುತ್ತಿದೆ. ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ, ಕೆಲ ವಿಷಯಗಳಲ್ಲಿ ಶಿಕ್ಷಕರೇ ಇಲ್ಲದಿರುವುದು ಪ್ರಮುಖ ಕಾರಣವಾಗಿವೆ. ಇದರೊಂದಿಗೆ ಕೆಲವೆಡೆ ಶಿಕ್ಷಕರು ಇದ್ದರೂ ಸರಿಯಾಗಿ ತರಗತಿಗೆ ಹಾಜರಾಗುವುದಿಲ್ಲ. ಪಾಠಗಳನ್ನು ಮುಗಿಸುವುದಿಲ್ಲವೆಂಬ ಆರೋಪಗಳಿವೆ.

ಪೂರಕವಾಗಿ ಮೊದಲಿನಿಂದಲೂ ಸರಿಯಾಗಿ ಕರ್ತವ್ಯ ನಿರ್ವಹಿಸದ, ರಾಜಕೀಯ ನಾಯಕರಂತೆ ಹೊರಗಡೆ ಓಡಾಡುವ ಶಿಕ್ಷಕಿಗೆ ನೋಟಿಸ್​ ನೀಡಿದ ಉದಾಹರಣೆಗಳು ಅನೇಕ ಇವೆ. ಮತ್ತೊಂದೆಡೆ ಶಿಕ್ಷಕರ ಕೊರತೆ ಮುಂದುವರೆದಿದೆ. ಅತಿಥಿ ಶಿಕ್ಷಕರ ಮೇಲೆಯೇ ಪಠ್ಯ ಚಟುವಟಿಕೆಗಳು ಅವಲಂಬಿತವಾಗಿವೆ. ಜಿಲ್ಲಾದ್ಯಂತ 957 ಪ್ರಾಥಮಿಕ ಹಾಗೂ 171 ಪ್ರೌಢ ಶಾಲೆಗಳಿವೆ. ಲಕ್ಷಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಸರ್ಕಾರ ಸರ್ಕಾರಿ ಶಾಲೆಗಳಲ್ಲಿಯೇ ಎಲ್​ಕೆಜಿ, ಯುಕೆಜಿ ಆರಂಭಿಸುತ್ತಿದೆ. ಪರಿಣಾಮ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು ಹಿಂದಿಗಿಂತ ಈಗ ಹೆಚ್ಚಾಗಿದೆ.
ವರ್ಗಾವಣೆ, ಖಾಲಿಯಾದ ಹುದ್ದೆಗಳಿಗೆ ಸಕಾಲದಲ್ಲಿ ನೇಮಕಾತಿ ನಡೆಸದಿರುವುದರಿಂದ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟು ಮಾಡಿದೆ.

ಪ್ರಾಥಮಿಕ ಶಾಲೆಗಳಲ್ಲಿ 6,365 ಹುದ್ದೆಗಳು ಮಂಜೂರಾಗಿದ್ದು, ಇವುಗಳಲ್ಲಿ 2,294 ಹುದ್ದೆಗಳು ಖಾಲಿ ಇವೆ. ಇನ್ನು ಪ್ರೌಢ ಶಾಲೆಯಲ್ಲಿ 1698 ಹುದ್ದೆಗಳಿದ್ದು, 410 ಹುದ್ದೆಗಳು ಖಾಲಿ ಉಳಿದಿವೆ. ಶಿಕ್ಷಣ ಗುಣಮಟ್ಟ ಸುಧಾರಣೆ ಸರ್ಕಾರ ಖಾಲಿ ಹುದ್ದೆಗಳಿಗೆ ಪ್ರತಿಯಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ನಡೆದಿ ಶಿಕ್ಷಕರ ನೇಮಕಾತಿಯಲ್ಲಿ ಕೆಲ ಹುದ್ದೆಗಳು ಭರ್ತಿಯಾಗಿವೆ. ಆದರೆ, ವರ್ಗಾವಣೆ ಪ್ರಕ್ರಿಯೆ ನಡೆಸಿದ್ದರಿಂದ ಬಹುಪಾಲು ಶಿಕ್ಷಕರು ವರ್ಗಾವಣೆ ಪಡೆದ ಕಾರಣ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಭಾದಿಸುತ್ತಿದೆ.

ಇನ್ನು ಈಗಿರುವ ಶಿಕ್ಷಕರಲ್ಲಿ ಕೆಲವರು ಶಾಲೆಗಳಲ್ಲಿ ಇರುವುದಿಲ್ಲ. ಹಾಜರಾತಿ ಹಾಕಿ ಹೊರಗೆ ಹೋಗುತ್ತಾರೆಂಬ ಆರೋಪಗಳಿವೆ. ಅದನ್ನು ತಡೆಯಲು ಪ್ರಾಯೋಗಿಕವಾಗಿ ಬಯೋಮೆಟ್ರಿಕ್​ ಹಾಜರಾತಿ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಫಲಿತಾಂಶ ಸುಧಾರಣೆ ಅಂಗವಾಗಿ ಶಾಲೆಗಳಿಗೆ ತಮ್ಮ ಅನುದಾನ ನೀಡಲು ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳ ಸಮ್ಮತಿಸಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಎಲ್ಲ ಶಾಲೆಗಳಿಗೆ ಬಯೋಮೆಟ್ರಿಕ್​ ಅಳವಡಿಸಿ ಶಿಕ್ಷಕರ ಹಾಜರಾತಿ ತಿಳಿಯಲು ಯೋಜನೆ ರೂಪಿಸಲಾಗಿದೆ.

ಬೆಳಗ್ಗೆ ಶಾಲೆ ಪ್ರವೇಶಿಸುವಾಗ ಹಾಗೂ ಸಂಜೆ ಮರಳುವಾಗ ಬಯೋಮೆಟ್ರಿಕ್​ ಮೂಲಕ ಹಾಜರಾತಿ ಹಾಕುವಂತೆ ನಿರ್ದೇಶಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಥವಾ ಶಾಸಕರು ಅನುದಾನ ನೀಡುವ ನಿರೀೆಯಲ್ಲಿ ಶಿಕ್ಷಣಾಧಿಕಾರಿಗಳಿದ್ದಾರೆ. ನೀಡಿದಲ್ಲಿ ಎಲ್ಲ ಶಾಲೆಗಳಿಗೂ ಅಳವಡಿಸಲು ಯೋಜಿಸಲಾಗಿದೆ.

ಶಾಸಕರ ಅನುದಾನದಲ್ಲಿ ಕೊಪ್ಪಳ ತಾಲೂಕಿನ ಶಾಲೆಗಳಿಗೆ ಬಯೋಮೆಟ್ರಿಕ್​ ಅಳವಡಿಕೆ ಮಾಡಲಾಗುವುದು. ಅನುದಾನ ಕೊಡುವುದಾಗಿ ಶಾಸಕ ರಾವೇಂದ್ರ ಹಿಟ್ನಾಳ ತಿಳಿಸಿದ್ದಾರೆ. ಶ್ರೀ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಉಳಿದ ತಾಲೂಕುಗಳಲ್ಲಿ ಅನುದಾನ ಲಭ್ಯವಾದಲ್ಲಿ ಅಳವಡಿಕೆ ಮಾಡಲಾಗುವುದು. ಶ್ರೀಶೈಲ ಬಿರದಾರ. ಡಿಡಿಪಿಐ ಕೊಪ್ಪಳ.

ಶ್ರೀಶೈಲ ಬಿರದಾರ. ಡಿಡಿಪಿಐ ಕೊಪ್ಪಳ.

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಅನೇಕ ಕಾರಣಗಳಿವೆ. ಶಿಕ್ಷಕರು ಸರಿಯಾಗಿ ಶಾಲೆಯಲ್ಲಿ ಇರುವುದಿಲ್ಲ. ಇದರಿಂದ ಪಾಠಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪಗಳಿವೆ. ಬಯೋಮೆಟ್ರಿಕ್​ ಅಳವಡಿಸಿ ಹಾಜರಾತಿ ಮಾಡಿ ಪ್ರಯೋಗ ಮಾಡಲಾಗುವುದು. ಸುಧಾರಣೆ ಆದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಅನುಕೂಲವಾಗಲಿದೆ. ಕೆ.ಪಿ.ಮೋಹನ್​ರಾಜ್​. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೊಪ್ಪಳ.

ಕೆ.ಪಿ.ಮೋಹನ್​ರಾಜ್​. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net