

ಕಾರವಾರ: ಎಸ್‌ಎಸ್‌ಎಲ್‌ಸಿಯ ಪರೀಕ್ಷೆಯಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 66 ವಿದ್ಯಾರ್ಥಿಗಳು ರಾಜ್ಯದಲ್ಲಿ 2 ರಿಂದ 10 ನೇ ಸ್ಥಾನ ಪಡೆದಿದ್ದಾರೆ. ಕುಮಟಾದ ಒಬ್ಬ ವಿದ್ಯಾರ್ಥೀನಿ 625 ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವೀತೀಯ ಸ್ಥಾನ ಪಡೆದಿದ್ದಾಳೆ. ಆಂಗ್ಲ ಮಾಧ್ಯಮದ ಮೂವರು ಜಿಲ್ಲೆಗೆ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದಾರೆ. ಆಂಗ್ಲ, ಕನ್ನಡ ಹಾಗೂ ಉರ್ದು ಮಾಧ್ಯಮಗಳ ಟಾಪ್ 3 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.
ಕನ್ನಡ ಮಾಧ್ಯಮ ಟಾಪ್ 3 ವಿದ್ಯಾರ್ಥಿಗಳು
ಭಟ್ಕಳ ಬೆಳಕೆ ಸರ್ಕಾರಿ ಪ್ರೌಢಶಾಲೆಯ ತೇಜಸ್ವಿನಿ ನಾಯ್ಕ, ಆಕಾಶ ಉದಯ ಹರಿಕಾಂತ(ಶೇ.99.04), ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್‌ನ ರಾಧಾ ಕಾಶಿನಾಥ ಪೈ, ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಶಿತಾ ಮಂಜಯ್ಯ ನಾಯ್ಕ (ಶೇ.98.88), ಭಟ್ಕಳ ಸಣಬಾವಿ ದುರ್ಗಾ ಪರಮೇಶ್ವರಿ ಹೈಸ್ಕೂಲ್‌ನ ಕೌಶಿಕ್ ದತ್ತಾ ದೇವಡಿಗ, ಹೊನ್ನಾವರ ಕಡ್ನೀರ್ ಹೊದ್ಕೆ ಶಿರೂರು ಸರ್ಕಾರಿ ಪ್ರೌಢಶಾಲೆಯ ರಮ್ಯಾ ಗಿರೀಶ ನಾಯ್ಕ, ಕುಮಟಾ ಬಾಡದ ಶ್ರೀ ಶಾಂತಿಕಾAಬಾ ಹೈಸ್ಕೂಲ್‌ನ ಯಾಮಿನಿ ಮಹಾಬಲೇಶ್ವರ ಪಟಗಾರ, ಕತಗಾಲ ಎಸ್‌ಕೆಪಿ ಹೈಸ್ಕೂಲ್‌ನ ಶ್ರೀನಿಽ ಶ್ರೀಧರ ಭಟ್, ಭಟ್ಕಳ ಬೈಲೂಕು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸ್ನೇಹಾ ಮಾದೇವ ನಾಯ್ಕ, ಮೇಘಾ ಗಿಡ್ಡಾ ನಾಯ್ಕ (ಶೇ.98.72)ಅಂಕ ಪಡೆದು ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಆಂಗ್ಲ ಮಾಧ್ಯಮ ಟಾಪ್ 3 ವಿದ್ಯಾರ್ಥಿಗಳು
ಕುಮಟಾ ಗಿಬ್ ಹೈಸ್ಕೂಲ್‌ನ ಭೂಮಿಕಾ ನಾಗರಾಜ ಹೆಗಡೆ (ಶೇ.99.84)ಅಂಕ ಪಡೆದು ಜಿಲ್ಲೆಗೆ ಮೊದಲ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾಳೆ. ಕಾರವಾರ ಸೇಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲ್‌ನ ರುತುಜಾ ವಿನೋದ ಪಾವಸ್ಕರ್, ಕುಮಟಾ ಸಿವಿಎಸ್‌ಕೆ ಪ್ರೌಢಶಾಲೆಯ ಸಮೀರ್ ರವಿ ದಿವಾನ್ (ಶೇ.99.68) ಅಂಕ ಪಡೆದು ಜಿಲ್ಲೆಗೆ ಎರಡನೇ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಕಾರವಾರ ಸುಂಕೇರಿ ನಿರ್ಮಲಾ ರಾಣಿ ಹೈಸ್ಕೂಲ್‌ನ ನೇಹಾ ಪ್ರಕಾಶ ಪಾವಸ್ಕರ್, ಕುಮಟಾ ಸಿವಿಎಸ್‌ಕೆಯ ಕೃತಿಕಾ ಮಹೇಶ ಭಟ್, ಭಟ್ಕಳ ಮಾವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮನೋಹರ ಮಂಜುನಾಥ ನಾಯ್ಕ (ಶೇ.99.52) ಅಂಕ ಪಡೆದು ಜಿಲ್ಲೆಗೆ ಮೂರನೆಯ ಹಾಗೂ ರಾಜ್ಯಕ್ಕೆ 4 ನೇ ಸ್ಥಾನ ಪಡೆದಿದ್ದಾರೆ.
ಉರ್ದು ಟಾಪ್3 ವಿದ್ಯಾರ್ಥಿಗಳು
ಉರ್ದು ಮಾಧ್ಯಮದಲ್ಲಿ ಕುಮಟಾ ಸಂತೆಗುಳಿ ಸರ್ಕಾರಿ ಪ್ರೌಢಶಾಲೆಯ ಸನಾ ಇಬ್ರಾಹಿಂ ಸಾಬ್(ಶೇ.98.08), ಕುಮಟಾ ತೌಹೀದ್ ಹೈಸ್ಕೂಲ್‌ನ ಐನಾ ಮಅರ್ಜಿಯಾ ರಿಜ್ವಾನ್ ಅಂಬಾಡಿ (ಶೇ.94.08), ಸಂತೆಗುಳಿ ಸರ್ಕಾರಿ ಪ್ರೌಢಶಾಲೆಯ ಉಜ್ಮಾ ಮೊಹಮದ್ ಷಾ(ಶೇ.93.76) ಅಂಕ ಪಡೆದು ಜಿಲ್ಲೆಗೆ ಟಾಪರ್‌ಗಳಾಗಿದ್ದಾರೆ.