ರೈತನ ಪುತ್ರಿ ಸಹನಾಗೆ 608 ಅಂಕ

Sahana bubali
Published on

ಕಲಬುರಗಿ: ಕಾಳಗಿ ತಾಲೂಕಿನ ಕೋಡ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಹಣಮಂತ ಬುಬಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 608 (97.28) ಅಂಕ ಪಡೆದು, ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ. ರೈತ ಹಣಮಂತ ಬುಬಲಿ ಅವರ ಪುತ್ರಿಯಾಗಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ, 97.28 ಲಿತಾಂಶ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆ ಮುಖ್ಯಗುರು, ಪೋಷಕರು, ಎಸ್​ಡಿಎಂಸಿ ಸದಸ್ಯರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net