ಎಸ್ಸೆಸ್ಸೆಲ್ಸಿ ಫಲಿತಾಂಶ : ಮೈಸೂರಿನ ಅವಳಿ ಸಹೋದರಿಯರಿಗೆ ಸಮಾನ ಅಂಕ..!

sslc result Mysore twin sisters get equal marks
Published on

ಮೈಸೂರು: ಮೈಸೂರಿನ ಮರಿಮಲ್ಲಪ್ಪ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅವಳಿ ಸಹೋದರಿಯರಾದ ಅಂಜಲಿ ವಿ. ಶಾಸ್ತ್ರಿ ಹಾಗೂ ಅದಿತಿ ವಿ. ಶಾಸ್ತ್ರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಬ್ಬರೂ ಸಹ 619 ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಅಂಜಲಿ ವಿ. ಶಾಸ್ತ್ರಿ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 100, ಹಿಂದಿಯಲ್ಲಿ 100, ಗಣಿತದಲ್ಲಿ 98, ವಿಜ್ಞಾನದಲ್ಲಿ 98, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಅದಿತಿ ವಿ.ಶಾಸ್ತ್ರಿ ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 99, ಹಿಂದಿಯಲ್ಲಿ 99, ಗಣಿತದಲ್ಲಿ 98, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈ ಅವಳಿ ಸಹೋದರಿಯರು ಅಗ್ರಹಾರದ ವೆಂಕಟರಮಣ, ವಿನಯಾ ದಂಪತಿ ಪುತ್ರಿಯಾಗಿದ್ದಾರೆ.

ಇಬ್ಬರಿಗೂ ಸಮಾನವಾದ ಅಂಕ ಬಂದಿರುವುದಕ್ಕೆ ಅವಳ ಸಹೋದರಿಯರು ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ತರಗತಿಗಳಲ್ಲಿ ನಡೆಸುತ್ತಿದ್ದ ಟೆಸ್ಟ್‌ಗಳಲ್ಲೂ ಕೆಲವೊಮ್ಮೆ ನಮಗೆ ಸಮಾನವಾದ ಅಂಕಗಳು ಬರುತ್ತಿದ್ದವು. ನಾವು ಬೇರೆ ಬೇರೆ ಕೊಠಡಿಯಲ್ಲಿ ಪರೀಕ್ಷೆ ಬರೆದ ಸಂದರ್ಭದಲ್ಲೂ ಸಮಾನವಾದ ಅಂಕಗಳು ಬಂದ ಉದಾಹರಣೆ ಇದೆ. ಅದೇ ರೀತಿ ಎಸ್ಸೆಸ್ಸೆಲ್ಸಿಯಲ್ಲಿ ನಮ್ಮಿಬ್ಬರಿಗೂ ಸಮಾನವಾದ ಅಂಕ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ಸಮಾನ ಅಂಕ ಬಂದಿರುವುದು ತುಂಬಾ ಸಂತಸ ಉಂಟು ಮಾಡಿದೆ. ಮನೆಯಲ್ಲಿ ನಾವಿಬ್ಬರು ಒಟ್ಟಿಗೆ ಕುಳಿತು ಓದುತ್ತಿದ್ದೆವು. ಶಾಲೆ ಹಾಗೂ ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ದೊರೆತ ಹಿನ್ನೆಲೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net