ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ

SSLC, Result Improvement, Field Education Officer, Vasant Rathoda, Head Teachers Meeting, Basavanbagewadi,
ಬಸವನಬಾಗೇವಾಡಿ ಪಟ್ಟಣದಲ್ಲಿನ ಬಸವೇಶ್ವರ ಸರ್ಕಾರಿ ಪಿಯು ಕಾಲೇಜಿನ ಸಭಾಭವನದಲ್ಲಿ ಎಸ್‌ಎಸ್‌ಎಲ್‌ಸಿ ಲಿತಾಂಶ ಸುಧಾರಣೆಗೆ ತಾಲೂಕುಮಟ್ಟದ ಮುಖ್ಯ ಗುರುಗಳ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಬಿಇಒ ವಸಂತ ರಾಠೋಡ, ಉಮಾದೇವಿ ಸೊನ್ನದ, ಆರ್.ಸಿ.ಕಲಬುರ್ಗಿ, ಗೀತಾ ಕುಲಕರ್ಣಿ, ವಿ.ಎಚ್.ಪುರೋಹಿತ ಇತರರಿದ್ದರು.
Published on

ಬಸವನಬಾಗೇವಾಡಿ: ಎಸ್.ಎಸ್.ಎಲ್.ಸಿ. ಲಿತಾಂಶ ಸುಧಾರಣೆಗೆ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ. ಶಿಕ್ಷಕರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡಬೇಕು. ಮಕ್ಕಳ ಗೈರು ತಪ್ಪಿಸಲು ಮನೆಮನೆಗೆ ಭೇಟಿ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ 2024-25ನೇ ಸಾಲಿನ ಎಸ್. ಎಸ್.ಎಲ್.ಸಿ. ಲಿತಾಂಶ ಸುಧಾರಣೆಗೆ ಬಸವನಬಾಗೇವಾಡಿ ತಾಲೂಕುಮಟ್ಟದ ಮುಖ್ಯ ಗುರುಗಳ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು.

ಹಿರಿಯ ಉಪನ್ಯಾಸಕ ಆರ್.ಸಿ.ಕಲಬುರ್ಗಿ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕು ಕಡಿಮೆ ಲಿತಾಂಶ ಬರುತ್ತದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಬೋಧನೆಗೆ ವಿಶೇಷ ಒತ್ತು ನೀಡಬೇಕು. ಜಿಲ್ಲೆಯು ಹಿಂದುಳಿದಿದೆ ಎಂಬ ಹಣೆಪಟ್ಟಿಯಿಂದ ಹೊರಬರಲು ಸಹ ದೃಢ ಸಂಕಲ್ಪ ಮಾಡೋಣ ಎಂದು ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಅಭಿವೃದ್ಧಿ) ಉಪನಿರ್ದೇಶಕಿ ಉಮಾದೇವಿ ಸೊನ್ನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಗಾಗ ಪಾಲಕ ಪೋಷಕರ ಸಭೆ ಮಾಡುವ ಮೂಲಕ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ವಿಶೇಷ ತರಬೇತಿ, ಗುಂಪು ಚರ್ಚೆ, ವಿದ್ಯಾರ್ಥಿಗಳ ವೈಯಕ್ತಿಕ ಕಡತ ನಿರ್ವಹಣೆ, ಪರಿಹಾರ ಬೋಧನೆ, ವಿದ್ಯಾರ್ಥಿಗಳ ಗುಂಪು ರಚಿಸಿ ಶಿಕ್ಷಕರಿಗೆ ದತ್ತು ನೀಡುವುದು, ಸ್ಪಷ್ಟ ಓದು, ಶುದ್ಧ ಬರಹ, ಸರಳ ಗಣಿತ ಅಂಶಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ನೋಡಲ್ ಅಧಿಕಾರಿ ವಿ.ಎಚ್.ಪುರೋಹಿತ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕಡ್ಡಾಯವಾಗಿ ನೈಜತೆಯಿಂದ ಗುರುತಿಸಿ ಪಟ್ಟಿ ಸಿದ್ಧಪಡಿಸಬೇಕು. ಅವರಿಗಾಗಿ ಒಂದು ಗಂಟೆ ವಿಶೇಷ ತರಗತಿಯನ್ನು ಮಾಡಿ ಮಕ್ಕಳಿಗೆ ಉಪಯೋಗವಾಗುವಂತೆ ಕ್ರಮವಹಿಸಬೇಕು. ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ತಾಲೂಕು ಉತ್ತಮ ಲಿತಾಂಶ ಬರುವಂತೆ ನೀವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ವಿಜಯಪುರದ ಡಯಟ್ ಹಿರಿಯ ಉಪನ್ಯಾಸಕಿ ಗೀತಾ ಕುಲಕರ್ಣಿ, ಉಪನ್ಯಾಸಕ ಅಶೋಕ ನಾಯ್ಕೋಡಿ, ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ, ತಳೇವಾಡ ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳಾದ ಸಂಗಮೇಶ ಪೂಜಾರಿ, ಅನುದಾನಿತ ಪ್ರೌಢಶಾಲೆಗಳ ಸಂಘ ಅಧ್ಯಕ್ಷ ಆರ್.ಎಸ್.ತುಂಗಳ, ಬಸವೇಶ್ವರ ಸರ್ಕಾರಿ ಪಪೂ ಕಾಲೇಜು ಮುಖ್ಯೋಪಾಧ್ಯಾಯ ರಮೇಶ ಪೂಜಾರಿ ಇತರರಿದ್ದರು. ತಾಲೂಕಿನ 100 ಶಾಲೆಗಳ ಮುಖ್ಯಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಆರ್.ಎನ್.ಪೂಜಾರಿ ಸ್ವಾಗತಿಸಿದರು. ಬಿಆರ್‌ಪಿ ಎಂ.ವಿ. ಗಬ್ಬೂರ ನಿರೂಪಿಸಿದರು. ಸಿಆರ್‌ಪಿ ಎಸ್.ಬಿ.ದಳವಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net