

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ರಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಶೇ.37.35 ಲಿತಾಂಶ ಬಂದಿದೆ. ಎರಡನೇ ಪರೀಕ್ಷೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 3689 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 1378 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಮೇ 26ರಿಂದ ಜೂ.2ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 280 ಪ್ರೌಢಶಾಲೆಗಳನ್ನು ನಿಗಧಿ ಮಾಡಲಾಗಿತ್ತು. 12 ಕೇಂದ್ರಗಳಲ್ಲಿ ಪರೀಕ್ಷೆಗೆ ಅನುವು ಮಾಡಿಕೊಡಲಾಗಿತ್ತು.
ಹೊಸಕೋಟೆ ಮುಂದು: ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ ಉತ್ತಮ ಲಿತಾಂಶ ಬಂದಿದೆ, 1002 ವಿದ್ಯಾರ್ಥಿಗಳು ಹಾಜರಾಗಿದ್ದು 521 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.51.09 ಲಿತಾಂಶ ಬಂದಿದೆ. ನಂತರದಲ್ಲಿ ದೇವನಹಳ್ಳಿ 49.93, ನೆಲಮಂಗಲ ಶೇ32.27 ಲಿತಾಂಶ ಬಂದಿದ್ದು, ದೊಡ್ಡಬಳ್ಳಾಪುರದಲ್ಲಿ 1100 ವಿದ್ಯಾರ್ಥಿಗಳ ಪೈಕಿ 223 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅತೀ ಕಡಿಮೆ ಅಂದರೆ ಶೇ.20.27 ಲಿತಾಂಶ ಬಂದಿದೆ. ಇದರಲ್ಲಿ 2257 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು 743 ಮಂದಿ ಪಾಸ್ ಆಗಿದ್ದಾರೆ. 1432 ಹೆಣ್ಣು ಮಕ್ಕಳ ಪೈಕಿ 635 ತೇರ್ಗಡೆಯಾಗಿದ್ದಾರೆ. ಗಂಡು ಮಕ್ಕಳ ಲಿತಾಂಶ ಶೇ.34.23 ಇದ್ದರೆ, ಹೆಣ್ಣು ಮಕ್ಕಳ ಲಿತಾಂಶ ಶೇ.44.34 ಬಂದಿದೆ. 79 ಸರ್ಕಾರಿ ಶಾಲೆಗಳ 1811 ವಿದ್ಯಾರ್ಥಿಗಳ ಪೈಕಿ 595 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.32.85 ಲಿತಾಂಶ ಬಂದಿದೆ, ಅನುದಾನಿತ 48 ಶಾಲೆಗಳ 895 ವಿದ್ಯಾರ್ಥಿಗಳ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.29.38 ಲಿತಾಂಶ ಪಡೆದಿದ್ದಾರೆ. ಅನುದಾನರಹಿತ 153 ಶಾಲೆಗಳ 983 ವಿದ್ಯಾರ್ಥಿಗಳ ಪೈಕಿ 520 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.52.89 ರಿಸಲ್ಟ್ ಬಂದಿದೆ.
2311 ವಿದ್ಯಾರ್ಥಿಗಳು ಅನುತ್ತೀರ್ಣ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪರೀಕ್ಷೆ-2 ಎದುರಿಸಿದ ವಿದ್ಯಾರ್ಥಿಗಳ ಪೈಕಿ 1378 ತೇರ್ಗಡೆಯಾಗಿದ್ದರೆ 2311 ವಿದ್ಯಾರ್ಥಿಗಳು ಮತ್ತೆ ಅನುತ್ತೀರ್ಣಗೊಂಡಿದ್ದಾರೆ. ಈ ಪೈಕಿ 1514 ಗಂಡುಮಕ್ಕಳು ಹಾಗೂ 797 ಹೆಣ್ಣುಮಕ್ಕಳಿದ್ದು ಎಸ್ಸೆಸ್ಸೆಲ್ಸಿ-3ರ ಪರೀಕ್ಷೆಗೆ ಸಿದ್ದಗೊಳ್ಳಬೇಕಿದೆ.
ಜು.5 ರಿಂದ ಪರೀಕ್ಷೆ-3: ಎಸ್ಸೆಸ್ಸೆಲ್ಸಿ ಮುಂದಿನ ಪರೀಕ್ಷೆ-3 ಮುಂದಿನ ಜು.5ರಿಂದ 12ರವರೆಗೆ ನಡೆಯಲಿದ್ದು, ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಮತ್ತೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ಎರಡೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದರೂ ಇದಕ್ಕೆ ಎದೆಗುಂದರೆ ಮತ್ತಷ್ಟು ಅಭ್ಯಾಸ ನಡೆಸುವ ಮೂಲಕ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಅವಕಾಶವಿದೆ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 9ನೇ ಸ್ಥಾನ: ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಕಳೆದ ಸಾಲಿನಲ್ಲಿ 9ನೇ ಸ್ಥಾನ ಪಡೆದಿದ್ದ ಗ್ರಾಮಾಂತರ ಜಿಲ್ಲೆ ಪ್ರಸಕ್ತ ಸಾಲಿನಲ್ಲೂ ಅದೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು. ಶೇ.73.71 ಲಿತಾಂಶ ಪಡೆದಿದ್ದು, ಇದೇ ಮೊದಲ ಬಾರಿಗೆ ಇಬ್ಬರು ವಿದ್ಯಾರ್ಥಿನಿಯರು ಪೂರ್ಣಾಂಕ ಪಡೆದು ಜಿಲ್ಲೆಯ ಕೀರ್ತಿ ತಂದಿದ್ದರು. 2019-20ನೇ ಸಾಲಿನಲ್ಲಿ ರಾಜ್ಯದಲ್ಲೇ 16 ನೇ ಸ್ಥಾನದಲ್ಲಿದ್ದ ಎಸ್ಸೆಸ್ಸೆಲ್ಸಿ ಲಿತಾಂಶ 2020-21ರಲ್ಲಿ ದಿಢೀರನೇ 3ನೇ ಸ್ಥಾನಕ್ಕೆ ಜಿಗಿದಿತ್ತು. ನಂತರ 2021-22ರಲ್ಲಿ 8 ನೇ ಸ್ಥಾನಕ್ಕೆ ಇಳಿದಿದ್ದ ಲಿತಾಂಶ ಕಳೆದ 2022-23ರಲ್ಲಿ ಮತ್ತೆ ನಾಲ್ಕನೇ ಸ್ಥಾನಕ್ಕೇರಿತ್ತು. 2023-24 ನೇ ಸಾಲಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
--
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ರಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿ ಶೇ.37.35 ಲಿತಾಂಶ ಬಂದಿದೆ. ಮುಂದಿನ ಬಾರಿ ಪರೀಕ್ಷೆ-3 ನಡೆಯಲಿದ್ದು, ಪ್ರಸ್ತುತ ಎರಡನೇ ಬಾರಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಮತ್ತೆ ನೋಂದಾಯಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶವಿದೆ. ಎರಡನೇ ಪರೀಕ್ಷೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 3689 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 1378 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಬೈಲಾಂಜನಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ