ಶಿಕ್ಷಣದ ಜತೆ ಬದುಕು ಕೂಡ ಮುಖ್ಯ

web 2
Published on

ಚಿಕ್ಕಮಗಳೂರು: ಶಿಕ್ಷಣದ ಜತೆ ಬದುಕು ಕೂಡ ಮುಖ್ಯ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪ್ರಮುಖ ಘಟ್ಟಗಳು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಹೇಳಿದರು.

ನಗರದ ಬೇಲೂರು ರಸ್ತೆಯ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಜೆಪಿ ಜಿಲ್ಲಾ ಒಬಿಸಿ ಘಟಕದಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಏಳೆಂಟು ತಿಂಗಳಿಂದ ಶಾಲೆ, ಕಾಲೇಜುಗಳಿಲ್ಲದೆ ಮಕ್ಕಳು ಆನ್​ಲೈನ್ ಪಾಠ ಕೇಳಿದರೂ ಶಾಲೆಯಲ್ಲಿ ನೇರವಾಗಿ ಪಾಠ ಕೇಳುವ ಅನುಭವವೇ ಬೇರೆಯಾಗಿರುತ್ತದೆ. ಕರೊನಾ ಹೆಮ್ಮಾರಿ ಓಡಿಸಲು ಗ್ರಾಮೀಣ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯು ಆಫ್​ಲೈನ್ ತರಗತಿ ಆರಂಭವಾಗಿದ್ದು, ಮಕ್ಕಳಲ್ಲಿ ಆತ್ಮವಿಶ್ವಾಸ, ಮನೋಸ್ಥೈರ್ಯ ತುಂಬಲು ಶಿಕ್ಷಣ ಸಚಿವ ಸುರೇಶ್​ಕುಮಾರ್ ಸಲಹೆ ಮೇರೆಗೆ ಪ್ರವಾಸ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net