ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಿಸ್ಡ್‌ಕಾಲ್ ಅಲರ್ಟ್, ಪ್ರಥಮ ಸ್ಥಾನಕ್ಕೆ ಗ್ರಾಮಾಂತರ ಜಿಲ್ಲೆ ಕಸರತ್ತು ಶಿಕ್ಷಣ ಇಲಾಖೆಯಲ್ಲಿ ಸಮರೋತ್ಸಾಹ

5dc19e58-d71a-4493-930b-14a5e1e0c70f
Published on

ಶಿವರಾಜ ಎಂ. ಬೆಂಗಳೂರು

ಹೇ ಟೀಚರ್‌ಗೆ ಮಿಸ್ಡ್‌ಕಾಲ್ ಕೊಡ್ರಪ್ಪ. ಆಗಲೆ ಬೆಳಗ್ಗೆ 5 ಗಂಟೆ ಆಗಿದೆ. ಎದ್ದೇಳಿ ಓದ್ಕೋಳಿ... ಈ ವರ್ಷ ಕಷ್ಟ ಪಟ್ಟು ಓದಿ, ಜೀವನದಲ್ಲಿ ಇದು ಟರ್ನಿಂಗ್ ಪಾಯಿಂಟ್... ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗಳಲ್ಲಿ ಬೆಳ್ಳಂಬೆಳಗ್ಗೆ ಕೇಳಿಬರುತ್ತಿರುವ ಮೊಬೈಲ್ ಅಲರ್ ್ಟ..!

ಹೌದು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದು ಬೀಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಈ ಬಾರಿ ಶತಾಯಗತಾಯ ಪ್ರಥಮ ಸ್ಥಾನ ದಕ್ಕಿಸಿಕೊಳ್ಳಲೇಬೇಕು ಎಂಬ ಸಮರೋತ್ಸಾಹದಲ್ಲಿದೆ. ಇದಕ್ಕಾಗಿ ಅನೇಕ ಯೋಜನೆಗಳ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿದೆ. ಆಯಾ ಶಾಲಾ ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪ್ರತಿ ದಿನ ಮುಂಜಾನೆ 5 ಗಂಟೆಗೆ ಆಯಾ ಶಿಕ್ಷಕರ ಮೊಬೈಲ್‌ಗೆ ಮಿಸ್ಡ್‌ಕಾಲ್ ಕೊಡುತ್ತಿದ್ದಾರೆ. ನಾವು ಎದ್ದೀದೀವಿ, ಅಭ್ಯಾಸ ಆರಂಭಿಸಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಮುಂಜಾನೆ ಬೇಗ ಎದ್ದು ಅಭ್ಯಾಸದಲ್ಲಿ ತೊಡಗುವ ಅಭ್ಯಾಸ ಮೂಡಿಸಲು ಹಾಗೂ ಅದರ ನಿರಂತರತೆಯನ್ನು ಕಾಯ್ದುಕೊಳ್ಳಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಆಯಾ ಶಿಕ್ಷಕರ ಹೆಗಲಿಗೆ ಹೊರಿಸಲಾಗಿದೆ. ಇದೇ ‘ಮಿಸ್ಡ್‌ಕಾಲ್ ಅಲರ್ಟ್’

ಶಿಕ್ಷಣ ಇಲಾಖೆ ಕಸರತ್ತು: ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರತಿ ವಿದ್ಯಾರ್ಥಿ ಜೀವನದ ಟರ್ನಿಂಗ್ ಪಾಯಿಂಟ್. ಭವಿಷ್ಯ ಸುಭದ್ರವಾಗಿರಬೇಕಾದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲೇಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಖುದ್ದು ಶಿಕ್ಷಕರು ಜಿದ್ದಿಗೆ ಬಿದ್ದವರಂತೆ ವಿದ್ಯಾರ್ಥಿಗಳನ್ನು ಓದಿನೆಡೆಗೆ ಹುರಿದುಂಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರ ಪರಿಣಾಮವೇ ಮಿಸ್ಡ್‌ಕಾಲ್ ಅಲರ್ಟ್ ರೂಪಿತಗೊಂಡಿದೆ.

ವಿಶೇಷ ತರಗತಿ: ಶಾಲೆ ಆರಂಭಕ್ಕೂ ಮೊದಲು 1 ಗಂಟೆ, ಶಾಲೆ ಮುಗಿದ ಬಳಿಕ ಸಂಜೆ ವೇಳೆ 1 ಗಂಟೆ ವಿಶೇಷ ತರಗತಿ ಆರಂಭಿಸಲಾಗಿದೆ. ಪ್ರತಿ ದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಪಾಠಪ್ರವಚನ, ಗ್ರೂಪ್ ಸ್ಟಡಿ, ವಿಷಯ ವಿನಿಮಯ ಮತ್ತಿತರ ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಪ್ರತಿ ತಿಂಗಳು ಜಿಲ್ಲೆ ಎಲ್ಲ ಶಾಲೆಯ ಮುಖ್ಯಶಿಕ್ಷಕರ ವಿಶೇಷ ಸಭೆ ಕರೆದು ಎಸ್ಸೆಸ್ಸೆಲ್ಸಿಯಲ್ಲಿ ಗುಣಾತ್ಮಕ ಲಿತಾಂಶ ಪಡೆಯುವುದರ ಬಗ್ಗೆ ಸಲಹೆ ಸೂಚನೆಗಳ ವಿಷಯ ವಿನಿಮಯ ನಡೆಯುತ್ತಿದೆ.

ಈ ಬಾರಿ ರಾಜ್ಯದಲ್ಲೇ ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನ ಪಡೆಯಲೇಬೇಕು ಎಂಬ ನಿಟ್ಟಿನಲ್ಲಿ ಅನೇಕ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 12654 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸುತ್ತಿದ್ದ್ದು ಅಷ್ಟೂ ವಿದ್ಯಾರ್ಥಿಗಳು ತೇರ್ಗಡೆಯಾಗುವ ನಿರೀಕ್ಷೆಯೊಂದಿಗೆ ಶ್ರಮಿಸುತ್ತಿದ್ದೇವೆ. ಕೃಷ್ಣಮೂರ್ತಿ ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ ನಾಲ್ಕೈದು ತಿಂಗಳಿನಿಂದಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ನುರಿತ ಶಿಕ್ಷಕರಿಂದ ತರಬೇತಿ ಮತ್ತಿತರ ಕಾರ್ಯಾಗಾರ ರೂಪಿಸಿಕೊಂಡು ಬರಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3384 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೈಯಪ್ಪರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಳ್ಳಾಪುರ ಗುಣಾತ್ಮಕ ಲಿತಾಂಶ ಪಡೆಯುವ ಸಲುವಾಗಿ ಪ್ರತಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲಾಗುತ್ತಿದೆ. ಇಲಾಖೆಯ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲಾಗಿದೆ. ಬೂದಿಗೆರೆಯಲ್ಲಿ ನೈಟ್‌ಕ್ಲಾಸ್ ಸಹ ನಡೆಸಲಾಗುತ್ತಿದೆ. ದೇವನಹಳ್ಳಿ ತಾಲೂಕಿನಲ್ಲಿ 3050 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಗಾಯತ್ರಿದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ದೇವನಹಳ್ಳಿ ಮನೆ ಭೇಟಿ ಕಾರ್ಯಕ್ರಮ ತಾಲೂಕಿನಲ್ಲಿ ಯಶಸ್ವಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸುವ ಕಾರ್ಯಕ್ರಮ ನಿರಂತವಾಗಿ ನಡೆಯುತ್ತಿದೆ. ತಾಲೂಕಿನಲ್ಲಿ ಪ್ರಸ್ತುತ 3472 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದರಾಗಿದ್ದಾರೆ. ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net