

ಕುಂದಾಪುರ: ನಿರಂತರ ಮಳೆಯಿಂದ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಆಗದ ವಿದ್ಯಾರ್ಥಿಗಳನ್ನು ಸ್ವತಃ ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮಿದೋಣಿಯಲ್ಲಿ ತೆರಳಿ ಕರೆತಂದರು. ಮರವಂತೆ ಗ್ರಾಮ ದ್ವೀಪ ನಿವಾಸಿಗಳಾದ ಶಿಲ್ಪಾ ಹಾಗೂ ದೀಕ್ಷಾ ನಾವುಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದು ಹೊಳೆಯಲ್ಲಿ ನೀರು ಹೆಚ್ಚಿದ್ದರಿಂದ ಸಮಸ್ಯೆ ಆಗಿತ್ತು. ವಿದ್ಯಾರ್ಥಿಗಳ ಸಮಸ್ಯೆ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನಿ ಜತೆ ದ್ವೀಪಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೆರವಾದರು.