ಪರೀಕ್ಷಾ ಅಕ್ರಮ ಮೇಲ್ವಿಚಾರಕನಿಗೆ ಎಸ್ಪಿ ಪಂತ್ ಬುದ್ಧಿ

IMG-20230404-WA0019
Published on

ಕಲಬುರಗಿ: ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನಲೆ ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಭೇಟಿ ನಿಡಿದ ಎಸ್ ಪಿ ಇಶಾ ಪಂತ್ ನಕಲು ಮಾಡಲು ಸಹಕರಿಸುತ್ತಿದ್ದ ಮೇಲ್ವಿಚಾರಕನಿಗೆ ಬುದ್ಧಿ ಹೇಳಿದ ಘಟನೆ ನಡೆದಿದೆ.

ಅಫಜಲಪುರ ತಾಲೂಕಿನ ಅತನೂರು ಗ್ರಾಮದ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿದ್ದ ವೇಳೆ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಕಂಡು ಶಾಕ್ ಆದ ಎಸ್ ಪಿ ಇಶಾ ಪಂತ್.

ನಕಲು ಮಾಡುವುದು ಮುಂದುವರೆದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಕಲು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೂ ಪೋನ್ ಮೂಲಕ ತಾಕೀತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net