ಮಂಡ್ಯದಲ್ಲಿ ಮತ್ತೊಂದು ದುರಂತ: ಉತ್ತೀರ್ಣಳಾಗಿದ್ದರೂ ಫೇಲ್ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ಬಾಲಕಿ

sucide
ಸಾಂದರ್ಭಿಕ ಚಿತ್ರ
Published on

ಮಂಡ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದರೂ ಫೇಲ್ ಆಗಿದ್ದಾನೆಂದು ತಪ್ಪಾಗಿ ಭಾವಿಸಿ ಮದ್ದೂರು ತಾಲೂಕು ಹುಲಿಗೆರೆಪುರ ಗ್ರಾಮದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗ್ರಾಮದ ಮಂಚೇಗೌಡ ಎಂಬುವರ ಮಗಳು ಅಮೃತಾ(16) ಮೃತೆ. ಈಕೆ ನಗರಕೆರೆ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಳು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.57ರಷ್ಟು ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾಳೆ. ಆದರೆ ಆದರೆ ಅನುತ್ತೀರ್ಣಳಾಗಿದ್ದೇನೆಂದು ತಪ್ಪಾಗಿ ಅರ್ಥೈಸಿಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಡಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿನಿಂದಾಗಿ ಪಾಲಕರು ಆಕ್ರಂದನ ಮುಗಿಲು ಮಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net