

ಚಿಕ್ಕಬಳ್ಳಾಪುರ: ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತರೊಂದಿಗೆ ದಾಖಲೆ ಫಲಿತಾಂಶ ಪಡೆಯುತ್ತಿರುವ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಪ್ರೌಢಶಾಲೆಯು
ಶೇ.100% ಫಲಿತಾಂಶ ಪಡೆದಿದೆ.
ರಾಜ್ಯಕ್ಕೆ ಸಿ.ಭುವನ್ ಗಣೇಶ್, ಎಸ್.ಪೂರ್ವಿ ಹಾಗೂ ಕೆ.ಆರ್.ತೇಜಸ್ವಿನಿ 624/625 ಅಂಕಗಳನ್ನು ಪಡೆಯುವುದರ ಮೂಲಕ ದ್ವೀತಿಯ ರ್ಯಾಂಕ್, ಹಾಗೆಯೇ 623/625 ಅಂಕಗಳನ್ನು ಪಡೆಯುವ ಮೂಲಕ ಕೆ.ಪೂರ್ವಿಕ ಮತ್ತು ತರುಣ್ ತೃತೀಯ ರ್ಯಾಂಕ್ ಪಡೆದಿದ್ದಾರೆ.
ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳು ಎ+ ಗ್ರೇಡ್ ಪಡೆದಿದ್ದು, ಎ ಶ್ರೇಣಿಯಲ್ಲಿ 45 ವಿದ್ಯಾರ್ಥಿಗಳು, ಬಿ+ ಶ್ರೇಣಿಯಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7 ವಿದ್ಯಾರ್ಥಿಗಳು ಬಿ ಶ್ರೇಣಿ ಪಡೆದಿದ್ದಾರೆ.
ಇನ್ನೂ ಪ್ರಥಮ ಭಾಷೆ ಕನ್ನಡದಲ್ಲಿ 13 ವಿದ್ಯಾರ್ಥಿಗಳು 125/125, ಇಂಗ್ಲೀಷ್ ಭಾಷೆಯಲ್ಲಿ 12 ವಿದ್ಯಾರ್ಥಿಗಳು, ಹಿಂದಿಯಲ್ಲಿ 36 ವಿದ್ಯಾರ್ಥಿಗಳು, ಗಣಿತದಲ್ಲಿ 24 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 7 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 17 ವಿದ್ಯಾರ್ಥಿಗಳು 100/100 ಅಂಕಗಳನ್ನು ಪಡೆದಿದ್ದಾರೆ ಎಂದು ಬಿಜಿಎಸ್ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಹಾಗೂ ಮುಖ್ಯಶಿಕ್ಷಕ ಡಿ.ಸಿ.ಮೋಹನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.