

ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಒಟ್ಟು ೯೭ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶಾಂತಿಯುತವಾಗಿ ಶುಕ್ರವಾರ ನಡೆಯಿತು.
ಜಿಲ್ಲೆಯ ದೇವದುರ್ಗ ತಾಲೂಕಿನ ೧೫ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಒಟ್ಟು ೪೩೮೨ ವಿದ್ಯಾರ್ಥಿಗಳಲ್ಲಿ ೪೨೭೮ ವಿದ್ಯಾರ್ಥಿಗಳು ಹಾಜರಾಗಿದ್ದು, ೧೦೪ ಗೈರಾಗಿದ್ದಾರೆ. ಲಿಂಗಸುಗೂರು ತಾಲೂಕಿನ ೧೮ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಒಟ್ಟು ೬೫೬೨ ವಿದ್ಯಾರ್ಥಿಗಳಲ್ಲಿ ೬೩೬೮ ವಿದ್ಯಾರ್ಥಿಗಳು ಹಾಜರಾಗಿದ್ದು, ೧೯೪ ಗೈರಾಗಿದ್ದಾರೆ.ಮಾನ್ವಿ ತಾಲೂಕಿನ ೧೮ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು,
ಒಟ್ಟು ೫೮೫೭ ವಿದ್ಯಾರ್ಥಿಗಳಲ್ಲಿ ೫೫೭೭ ವಿದ್ಯಾರ್ಥಿಗಳು
ಹಾಜರಾಗಿದ್ದು, ೨೮೦ ಗೈರಾಗಿದ್ದಾರೆ. ರಾಯಚೂರು ತಾಲೂಕಿನ ೨೭ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಒಟ್ಟು ೯೮೨೦ ವಿದ್ಯಾರ್ಥಿಗಳಲ್ಲಿ ೮೭೭೬ ವಿದ್ಯಾರ್ಥಿಗಳು ಹಾಜರಾಗಿದ್ದು, ೩೪೪ ಗೈರಾಗಿದ್ದಾರೆ.
ಸಿಂಧನೂರು ತಾಲೂಕಿನ ೧೯ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಒಟ್ಟು ೫೬೯೬ ವಿದ್ಯಾರ್ಥಿಗಳಲ್ಲಿ ೫೪೯೯ ವಿದ್ಯಾರ್ಥಿಗಳು ಹಾಜರಾಗಿದ್ದು, ೧೯೭ ಗೈರಾಗಿದ್ದಾರೆ. ಈ ಮೂಲಕ ಜಿಲ್ಲೆಯ ಒಟ್ಟು ೩೧೬೧೭ ವಿದ್ಯಾರ್ಥಿಗಳ ಪೈಕಿ ೩೦೪೯೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,೧೧೧೯ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ಡಾ.ಕೆ.ಡಿ.ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.